Shimoga News ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಖ್ಯ ಚುನಾವಣಾಧಾರಿಯಾಗಿ ಹಿರಿಯ ಪತ್ರಕರ್ತ ಶಿವಮೊಗ್ಗ ಟೆಲೆಕ್ಸ್ ಪತ್ರಿಕೆಯ ಸಂಪಾದಕ ಎನ್. ರವಿಕುಮಾರ್‌ರವರು ಇಂದು ಅಽಕಾರ ಸ್ವೀಕರಿಸಿದರು.
ಬೆಂಗಳೂರಿನ ಕಂದಾಯ ಭವನದಲ್ಲಿನ ಕೇಂದ್ರ ಕಛೇರಿಯಲ್ಲಿ ಅಽಕಾರ ಸ್ವೀಕರಿಸಿದ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘದ ಕಾನೂನು ಸಲಹೆಗಾರರಾದ ಗೋಪಾಲ ಗೌಡ, ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್. ಯು. ವೈದ್ಯನಾಥ್ ಸೇರಿದಂತೆ ರಾಜ್ಯ ಪದಾಽಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.
Shimoga News ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ತಗಡೂರುರವರು, ಪತ್ರಕರ್ತರ ಈ ಚುನಾವಣೆಯು ರಾಜ್ಯದ ಗಮನ ಸೆಳೆದಿದ್ದು, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಗುರುತರವಾದ ಜವಾಬ್ದಾರಿ ಅಽಕಾರಿಗಳ ಮೇಲಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಎನ್. ರವಿಕುಮಾರ್‌ರವರು, ಚುನಾವಣೆಯ ವಿಽ ವಿಧಾನಗಳನ್ನು ವಿವರಿಸಿ, ಎಲ್ಲರ ಸಹಕಾರ ಕೋರಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಽಕಾರಿ ಜಗದೀಶ್‌ರವರು, ಸಂಘದ ಕಛೇರಿಯಲ್ಲಿ ನಿರ್ಮಿಸಲಾದ ಅಪರೂಪದ ಪುಸ್ತಕ ಸಂಗ್ರಹ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಕಂಕಮೂರ್ತಿ ಗ್ರಂಥಾಲಯ ಹಾಗೂ ಪುಸ್ತಕಗಳ ಮಹತ್ವವನ್ನು ವಿವರಿಸಿದರು.
