Shimoga News ತಾಳಗುಂದ ಗ್ರಾಮವು ಅತ್ಯಂತ ಅಮೂಲ್ಯವಾದ ಸಾಂಸ್ಕೃತಿಕ ಹಾಗೂ ಪುರಾತತ್ವದ ಮಹತ್ವ ಹೊಂದಿದೆ. ಈ ಸ್ಥಳದಲ್ಲಿ ಉತ್ಪನನ ಕಾರ್ಯ ನಡೆಸುವ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಉತ್ಸುಕವಾಗಿದ್ದು, ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ವೃತ್ತದ ಅಧಿಕಾರಿ ಸುಜಿತ್ ನಯನ್ ಹೇಳಿದರು.
ಹತ್ತಿರದ ಬಳ್ಳಿಗಾವಿ, ತಾಳಗುಂದ ಹಾಗೂ ಬಂದಳಿಕೆ ಗ್ರಾಮಗಳಿಗೆ ಭೇಟಿ ನೀಡಿದ ಅವರು ಜನರನ್ನು ಉದ್ದೇಶಿಸಿ ಮಾತನಾಡಿ, ತಾಳಗುಂದದೆ ಇತಿಹಾಸವು ಕರ್ನಾಟಕದ ಪ್ರಾಚೀನ ರಾಜವಂಶಗಳ ಬೆಳವಣಿಗೆಯ ಸಾಕ್ಷಿಯಾಗಿದೆ. ಇಲಾಖೆಯು ಎಲ್ಲ ಅಡೆತಡೆಗಳನ್ನು ನಿವಾರಿಸಿ ಶೀಘ್ರದಲ್ಲೇ ಪುರಾತತ್ರ ತಪಾಸಣೆ ಮತ್ತು ಸಂಶೋಧನೆ ಪ್ರಾರಂಭಿಸುತ್ತದೆ ಎಂದು ತಿಳಿಸಿದರು.
Shimoga News ಬಳ್ಳಿಗಾವಿಯ ಅಂಜನೇಯ ಸ್ವಾಮಿ ದೇವಾಲಯದ ನೂತನ ಕಟ್ಟಡ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿದ ಅವರು, ಗ್ರಾಮಸ್ಥರ ಮನವಿ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಶಿಫಾರಸ್ಸಿನ ಮೇರೆಗೆ ಪುರಾತತ್ವ ಇಲಾಖೆ ಈ ಕಾಮಗಾರಿಯನ್ನು ಕೈಗೊಳ್ಳಲಿದೆ. ಅಲ್ಲಮ್ಮ ಪ್ರಭು ಗದ್ದಿಗೆಗೆ ಸಂಬಂಧಿಸಿದ ಎಲ್ಲ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಅನುಮತಿ ಪಡೆಯಬಹುದು. ಸ್ಥಳೀಯ ಅಧಿಕಾರಿಗಳು ಅವರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಹಾರ ಹಾಕಿ ಸ್ವಾಗತಿಸಿದರು. ಪುರಾತತ್ವ ಇಲಾಖೆಯ ಶಿವಮೊಗ್ಗ ವಿಭಾಗದ ಅಧಿಕಾರಿ ಗೌತಮ್, ದಾವಣಗೆರೆ ವಿಭಾಗದ ಅಧಿಕಾರಿ ಸುಧೀರ್, ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯಕ ವೇದಿಕೆ ಅಧ್ಯಕ್ಷ ಡಾ.ಸಾಮಕ್, ಕಾರ್ಯದರ್ಶಿ ದಿಲೀಪ್ ನಾಡಿಗ್, ಬಳ್ಳಿಗಾವಿ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ್ ದಾನೇರ್, ರಾಮಣ್ಣ, ತಾಪಂ ಮಾಜಿ ಸದಸ್ಯ ಲಾರಿ ಮಲ್ಲಣ್ಣ, ಎಪಿಎಂಸಿ ಮಾಜಿ ಸದಸ್ಯ ನಾಗರಾಜ್, ಪ್ರಮುಖರಾದ ಉಜ್ಜಪ್ಪ, ಮಂಜುನಾಥ್, ರಾಜಣ್ಣ ಭಾರಂಗಿ, ರಾಜೇಶ್ವರಿ ದಾನೇರ್, ಶಿಲ್ಪ, ನಾಗರಾಜ್, ರಾಜಶೇಖರ್ ಇತರರಿದ್ದರು.
