ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಕೆನಡಾ ದೇಶದ ಭಾರತೀಯ ಉಪ ಹೈಕಮಿಷನರ್ ಜಿಯಾಫ್ರಿ ಡೀನ್ ಅವರು ಭೇಟಿ ಮಾಡಿ, ಕರ್ನಾಟಕ ರಾಜ್ಯ ಹಾಗೂ ಕೆನಡಾ ದೇಶದ ಸಹಯೋಗದಲ್ಲಿ ಕರ್ನಾಟಕದಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.
ರಾಜ್ಯದಲ್ಲಿ ಔದ್ಯೋಗೀಕರಣ, ಸ್ಟಾರ್ಟ್ ಅಪ್ ಗಳ ಕುರಿತು, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲೀಕರಣ, ಉನ್ನತ ಶಿಕ್ಷಣ ಹಾಗೂ ನೈಪುಣ್ಯತೆ, ಶುದ್ಧ ಇಂಧನ, ಕರ್ನಾಟಕ ಮತ್ತು ಕೆನಡಾ ದೇಶದ ಬಾಂಧವ್ಯ, ಪ್ರವಾಸೋದ್ಯಮದ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಕೆನಡಾ ದೇಶದ ರಾಯಭಾರಿ ಮಾರ್ಟಿನ್ ಬರ್ರಾಟ್ , ಮಂಜುನಾಥ ಕೆ. ಎಸ್, ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಕುಮಾರ್, ಮಂಜುಳ ಎನ್ ಮತ್ತಿತರರು ಉಪಸ್ಥಿತರಿದ್ದರು.
ಕೆನಡಾ ದೇಶದ ಭಾರತೀಯ ಉಪ ಹೈಕಮಿಷನರ್ ಜಿಯಾಫ್ರಿ ಡೀನ್ ಅವರು ಭೇಟಿ ಮಾಡಿದ ಶಾಲಿನಿ ರಜನೀಶ್
Date:
