B.Y.Raghavendra ಜಿಲ್ಲಾ ಉಸ್ತುವಾರಿ ಸಚಿವರು ಜಾತಿ ಗಣತಿ ವಿಷಯದಲ್ಲಿ ಮಾಧ್ಯಮದಲ್ಲಿ ಮಾತನಾಡಿದ್ದಾರೆ
ಇದನ್ನು ಗಮನಿಸಿದರೆ ಅವರಿಗೆ ಏನೂ ಗೊತ್ತಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಿರೋಧ ಪಕ್ಷವಾಗಿ ನಾವು ವಿಷಯವನ್ನು ತೆಗೆದುಕೊಳ್ಳುವುದಕ್ಕಿಂತ ಅವರ ಪಕ್ಷದವರೇ ಹೇಗೆ ತೆಗೆದುಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ.
ಗಣತಿ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಜೋಶಿ ಹಾಗೂ ವಿಜಯೇಂದ್ರ ಬಗ್ಗೆ ಸುಮೊಟೋ ಕೇಸ್ ದಾಖಲಾಗಬೇಕು ಸಂಸದರಾದ ಬಿ.ವೈ.ರಾಘವೇಂದ್ರ ಎಂದಿದ್ದಾರೆ.
ಸಂವಿಧಾನದ ೭ನೇ ಶಡ್ಯೂಲ್ ನಲ್ಲಿ ಯಾರು ಗಣತಿ ಮಾಡಬೇಕು ಎಂದು ಹೇಳಿದೆ
ಅದರ ಪ್ರಕಾರ ಜನಗಣತಿ ನಡೆಸುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ. ಹೀಗಿದ್ದೂ ರಾಜ್ಯ ಸರ್ಕಾರ ಸಮೀಕ್ಷೆ-ಗಣತಿ ನಡೆಸುತ್ತಿದೆ
ಹಿಂದೆ ಇವರೇ ಮಾಡಿದ ಸಮೀಕ್ಷೆ ಪಕ್ಕಕ್ಕಿಡಲಾಗಿದೆ. ಹಿಂದಿನ ಸಮೀಕ್ಷೆಯ ಮಾಹಿತಿ ಸಹ ಸೋರಿಕೆ ಆಗಿದೆ
ಶಿಕ್ಷಕರು ಬಲವಂತವಾಗಿ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ
ಅಧಿಕಾರಿಗಳು ರಿನೀವಲ್ ಪ್ರೊಸೆಸ್ ಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಹಿಂದವನ್ನು ತೃಪ್ತಿಗೊಳಿಸಲು ಸಿಎಂ ಸಿದ್ದರಾಮಯ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಎಂಬುದರ ಬಗ್ಗೆ ಜನ ಮಾತನಾಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಿಂದುಳಿದ ವರ್ಗದ ಚಾಂಪಿಯನ್ ರೀತಿ ನಡೆದುಕೊಳ್ಳುತ್ತಿದ್ದಾರೆ
ಆದರೆ ಕಾಂಗ್ರೆಸ್ ಕುತಂತ್ರದಿಂದ ಅಂಬೇಡ್ಕರ್ ಗೆ ಸೋಲಾಯಿತು, ತುರ್ತು ಪರಿಸ್ಥಿತಿ ಜಾರಿಗೆ ಬಂತು, ಕಾಕಾ ಕಾಲೇತ್ಕರ್ ವರದಿ ಏಕೆ ಜಾರಿಯಾಗಲಿಲ್ಲ. ಮೊನ್ನೆ ತಾನೇ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹೋಗಿ ಸಚಿವರಾಗಿರುವ ಮಧು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
B.Y.Raghavendra ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದವರ ಕತೆ ಏನಾಗಿದೆ, ಬಿಜೆಪಿಯಲ್ಲೇನಾಗಿದೆ ಎಂದು ಜನರಿಗೆ ಗೊತ್ತಿದೆ
ಹಿಂದುಳಿದ ವರ್ಗದವರಿಗೆ ಕೇಂದ್ರದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟೊಂದು ಸಂಖ್ಯೆಯಲ್ಲಿ ಹಿಂದುಳಿದ ವರ್ಗಕ್ಕೆ ಅನುಕೂಲ ಮಾಡಿದ್ದಾರೆ.
ಎಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ ?ಎಂದು ನಾಡಿನ ಜನತೆಗೆ ಗೊತ್ತಿದೆ
ಈ ಸಮೀಕ್ಷೆಯೂ ಯಶಸ್ವಿಯಾಗುವುದಿಲ್ಲ. ಹಿಂದೆ ಮಾಡಿದ ಸಮೀಕ್ಷೆ ಏನಾಯಿತು, ಈಗೀನ ಸಮೀಕ್ಷೆ ಸಹ ಅದೇ ರೀತಿ ಆಗಲಿದೆ ಎಂದು ಹೇಳಿದ್ದಾರೆ.
