ದುರ್ಗಿಗುಡಿ ಮುಖ್ಯ ರಸ್ತೆ, ಶನಿಮಹಾತ್ಮ ದೇವಸ್ಥಾನದ ಹತ್ತಿರ ಮೊದಲ ಮಹಡಿಯಲ್ಲಿರುವ ತೃಪ್ತಿ ಹೆಲ್ತ್ ಕೇರ್‌ನಲ್ಲಿ ಹೊಳೆಹೊನ್ನೂರು ಗ್ರಾಮ ಪಟ್ಟಣ ಪಂಚಾಯಿತಿ ಪುರಸಭೆಯ ಪೌರಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.
ಶಿಬಿರದಲ್ಲಿ ಅಲ್ಟಾಸೌಂಡ ಸ್ಕಾ÷್ಯನಿಂಗ್, ಇ ಸಿ ಜಿ (ರಿಪೋಟ್ ಸಹಿತ), ಬಿಪಿ, ಪಲ್ಸ್, ಶುಗರ್, ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು. ಕಿಡ್ನಿ ಮತ್ತು ಮೂತ್ರಕೋಶರೋಗಗಳ ತಜ್ಞ ಡಾ. ಚಂದ್ರಶೇಖರ್ ಅವರು ಭಾಗವಹಿ ಸಿದ್ದ ಪೌರಕಾರ್ಮಿಕರಿಗೆ ಕಿಡ್ನಿ, ಮೂತ್ರ ಕೋಶಗಳು ಮತ್ತಿತರ ರೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ತೃಪ್ತಿ ಹೆಲ್ತ್ಕೇರ್‌ನಿಂದ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
Date:
