Rotary Jubilee Club ಆಧುನಿಕ ಸಮಾಜದಲ್ಲಿ ಎಲ್ಲದಕ್ಕು ಬೆಲೆಯಿದೆ. ಆದರೆ ಮಾನವೀಯತೆಯ ಮೌಲ್ಯ ಕಳೆದು ಹೋಗುತ್ತಿದೆ. ಇದು ಯಾರ ತಪ್ಪು ಒಪ್ಪುಗಳ ವಿಚಾರವಲ್ಲ. ಕಲಿಯುಗದ ಪ್ರಭಾವ, ಎಲ್ಲದರಲಿಯೂ ಸ್ವಹಿತ ಕಾಣುತ್ತದೆ
ಆದ್ದರಿಂದ ತಾವು ನಿಸ್ವಾರ್ಥವಾಗಿ ಹಿರಿಯರ ಸೇವೆ ಮಾಡುತ್ತಿರುವುದಾಗಿ ಸ್ನೇಹ ಜೀವಿ ಟ್ರಸ್ಟನ ಸೇವಾಕರ್ತೆ ಶ್ರೀಮತಿ ಮಾಲತಿಯವರು ರೋಟರಿ ಜ್ಯೂಬಿಲಿ ಕ್ಲಬ್ ನ ವಾರದ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಚಿಕ್ಕ ಮಯಸ್ಸಿನಲ್ಲಿ ತಂದೆಯನ್ನು ಕಳೆದು ಕೊಂಡು, ಸೊರಬದಿಂದ ಶಿವಮೊಗ್ಗ ದಲ್ಲಿ ನೆಲಸಿ, ತಾಯಿ ಶ್ರೀದರ್ ಆಸ್ವತ್ರೆಯಲ್ಲಿ ಸೇವೆ ಮಾಡುತ್ತ ತಮ್ಮನ್ನು ಸಾಕಿದರು, ಜೀವನಕ್ಕೆ ಹಲವಾರು ಕೆಲಸ ಮಾಡಿ ಯಾವುದರಲು ತೃಪ್ತಿ ಕಾಣದೆ, ತಾವೆ ಸ್ವಂತ ಕಾರ್ಯಪ್ರವೃತರಾಗಲು, ವಯೋವೃದ್ಧರನ್ನು ನೋಡಿಕೊಳ್ಳುವ ಕಾಯಕದ ಕೆಲಸ ಪ್ರಾರಂಭಿಸಿ ಹಲವಾರು ಜೀವಗಳಿಗೆ ಆಸರೆ ಯಾದ ತೃಪ್ತಿ ಇದೆ ಎಂದರು.
ಪ್ರಾರಂಭದಲ್ಲಿ ಬಹಳಷ್ಟು ಕಷ್ಟ ನಷ್ಟ ಅನುಭವಿಸಿ, ಇಂದು ಒಂದು ಹಂತದಲ್ಲಿ ಸೇವಾ ಕಾರ್ಯ ಮಾಡುತ್ತಿರುವುದಾಗಿಯೂ, ಇಂದಿಗೂ ಅನೇಕ ಪಾಠಗಳನ್ನು ಪ್ರತಿದಿನ ಕಲಿಯುತ್ತಿದ್ದೇವೆ. ಜನರ ನಡೆ ನುಡಿ ನಮ್ಮ ಕಾರ್ಯದ ಬದಲಾವಣೆಗೆ ಪ್ರೇರಣೆಯಾಗಿದೆ.
ಇಂದು ಹಣಕ್ಕೆ ಬಹಳಷ್ಟು ಜನರಲ್ಲಿ ಕೊರತೆ ಇಲ್ಲ. ಆದರೆ ಮಾನವೀಯ ಮೌಲ್ಯದ ಕೊರತೆ ಯಿಂದಾಗಿ, ಮಾನಸಿಕವಾಗಿ ಅದೋಗತಿಗೆ ಇಳಿದು, ನಿಶಕ್ತಿಯಿಂದ ತಮ್ಮ ಕಾರ್ಯ ತಾವು ಮಾಡಿ ಕೊಳ್ಳಲಾಗದೆ, ಅವರನ್ನು ನೋಡಿ ಕೊಳ್ಳುವವರು ಇಲ್ಲದೆ, ನಮ್ಮ ಬಳಿ ಕರೆದು ಕೊಂಡು ಬರುತ್ತಿದ್ದಾರೆ.
Rotary Jubilee Club ಹಣ ಇದೆ, ತಂದೆ, ತಾಯಿ, ಅಜ್ಹಿ, ಸಂಬಂದಿಗಳನ್ನು ಪೋಷಣೆ, ಪಾಲನೆ ಮಾಡುವ ವ್ಯವದಾನವಿಲ್ಲ. ಹಣ ಕೊಡುತೇವೆ ನೀವೆ ನೊಡಿ ಕೊಳ್ಳಿ ಎನ್ನುವವರೆ ಬಹಳ. ಹಲವರು ವಿದೇಶದಲ್ಲಿ ಇದ್ದು ಇಲ್ಲಿಯ ಪಾಲಕರನ್ನು ಆಶ್ರಮದಲ್ಲಿ ಬಿಟ್ಟು, ಹಣ ಕಳಿಸುತ್ತಾರೆ. ಅವರು ಮೃತರಾದಾಗ ಸಹ ಬರಲಾಗದೆ, ನೀವೆ ಅಂತಿಮ ಕಾರ್ಯ ಮಾಡಿ ವೀಡಿಯೊ ಕಳಿಸಿ ಎನ್ನುವವರು ಇದ್ದಾರೆ.
ಈ ಸೇವಾ ಕಾರ್ಯಕ್ಕೆ ತಾಳ್ಮೆ,ಶಾಂತಿ, ಸಂಮ್ಯಮ ಬೇಕು. ಎಲ್ಲರನ್ನು ಮಗುವಿನಂತೆ ನೋಡಿ ಕೊಳ್ಳಬೇಕು. ಮನೆಯಲ್ಲಿ ಯಾರೋ ಏನೋ ಎಂದರು ಎಂದು, ಮನಃ ನೊಂದು ಮನಸ್ಸಿನಲ್ಲಿ ಇಟ್ಟು ಕೊಂಡು ಕೊರಗುತ್ತಾರೆ. ಇಂತವರ ಆಸೆ, ಆಕಾಂಕ್ಷೆ, ಆರೋಗ್ಯಗಳನ್ನು ವಿಚಾರಿಸಿ, ಔಷದ ಉಪಚಾರವನ್ನು ಸಮಯಕ್ಕೆ ಸರಿಯಾಗಿ ಮಾಡಿ, ಶುಚಿ, ರುಚಿ, ಅಗತ್ಯ ಆಹಾರ ಸರಬರಾಜು ಮಾಡಿ ಅವರನ್ನು ಸರಿದಾರಿಗೆ ತಂದು ಮನೆಗೆ ಕಳುಹಿಸಿ ಕೊಡುತ್ತೇವೆ. ಕೆಲವರು ಪ್ರವಾಸ ಹೋಗುವಾಗ ಕೆಲವು ದಿನದ ಮಟ್ಟಿಗೆ ನಮ್ಮಲ್ಲಿಗೆ ಹಿರಿಯರನ್ನು ಬಿಟ್ಟು ಹೋಗುತ್ತಾರೆ. ಆದರೆ ನಾವು ಯಾವುದೆ ಕಾರ್ಯಕ್ರಮಕ್ಕೂ ಹೊಗುವಂತಿಲ್ಲ. ಇವರ ಆರೈಕೆಯಲ್ಲಿಯೆ ಸುಖ ಕಾಣುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿ.ಎಸ್.ಅಶ್ವಥ್ ಸಮಾಜ ಮುಂದುವರಿದಂತೆ, ಕೂಡು ಕುಟುಂಬ ಪದ್ದತಿ ನಶಿಸಿ, ಹಿರಿಯ ಜೀವಗಳಿಗೆ ಗೌರವ ಕೊಡುವುದನ್ನೆ ಮರೆಯುತ್ತಿದ್ದಾರೆ. ಸಂಬಂದವೆ ಇಲ್ಲದ ವಯೋವೃದ್ದರನ್ನು ಜೋಪಾನ ಮಾಡುತ್ತಿರುವ ಮಾಲತಿ ಕುಟುಂಬದವರ ಕಾರ್ಯ ಶ್ಲಾಗನೀಯ ಎಂದು ಅವರನ್ನು ಗೌರವಿಸಿದರು.
ಲಕ್ಷ್ಮೀನಾರಾಯಣ್ ಸ್ವಾಗತಿಸಿದರು, ಭಾರದ್ವಾಜ್ ಪ್ರಾಸ್ತಾವಿಕ ನುಡಿ ನುಡಿದರು, ಉಮಾದೇವಿ ನಿರೂಪಿಸಿ, ರೇವಣಸಿದ್ದಪ್ಪ ವಂದಿಸಿದರು,ರಾಘವೇಂದ್ರ, ಹರೀಶ್, ಪ್ರವೀಣ್ ಜವಳಿ, ಉಮೇಶ್, ವಾಗೇಶ್, ಗಂಗಾಧರಸ್ವಾಮಿ, ನವೀನ್ ಹೇಮಾಶೇಖರ್, ರಾಜಶೇಖರ್ ಮುಂತಾದವರಿದ್ದರು
Rotary Jubilee Club ಮಾನವೀಯ ಮೌಲ್ಯಗಳು ದೂರವಾಗುತ್ತಿದೆ: ಸ್ನೇಹ ಜೀವಿ ಮಾಲತಿ
Date:
