Sri Ramakrishna Gurukula Residential School ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆ ಅನುಪಿನಕಟ್ಟೆ ಶಿವಮೊಗ್ಗದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾರಿ ಬಹುಮಾನಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪ್ರಾಥಮಿಕ ಶಾಲೆಯ ಮಕ್ಕಳು ಯೋಗಾಸನದಲ್ಲಿ ಆರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದು, ಚೆಸ್, ಖೋ ಖೋ ದಲ್ಲಿ ಪ್ರಥಮ, ಡಿಸ್ಕಸ್ ತ್ರೋ, ಹರ್ಡಲ್ಸ್, ವಾಲಿಬಾಲ್ ನಲ್ಲಿ ದ್ವಿತೀಯ, ಉದ್ದ ಜಿಗಿತ, 100 ಮೀ ರಿಲೇಯಲ್ಲಿ ತೃತೀಯ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿದ್ಯಾರ್ಥಿಗಳು ಸಹ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಯೋಗಾಸನ , ಚೆಸ್, ವಾಕ್ ರೇಟ್ ಹರ್ಡಲ್ಸ್ ಟೆನ್ನಿಸ್ ತ್ರೋ ದಲ್ಲಿ ಪ್ರಥಮ ಸ್ಥಾನ ಪಡೆದು ಉದ್ದ ಜಿಗಿತ ಕೋಕೋ ಕಬಡ್ಡಿ ದ್ವಿತೀಯ ಸ್ಥಾನ ಜಾವೆಲಿನ್ ಎತ್ತರ ಜಿಗಿತ 200 ಮೀಟರ್ ರನ್ನಿಂಗ್ ರೇಸ್ ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
17 ವರ್ಷದ ವಯೋಮಿತಿಯ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಹಲವು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈಶ್ವರ್ ಪಿ. 50 ಮೀ. ಬಟಪ್ಲೈ, 100 ಮೀಟರ್ ಬಟಪ್ಲೈ,,100 ಮೀಟರ್ ಟಿ.ಎಂ. ರಿಲೇ ಹಾಗೂ 400 ಮೀಟರ್ ಪ್ರೀ ಸ್ಟೈಲ್ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಯಶಸ್ ಟಿ.ವಿ. ಅವರು 400 ಮೀಟರ್ ಪ್ರೀಸ್ಟೈಲ್, 100 ಮೀಟರ್ ಬೆಸ್ಟ್ ಸ್ಟ್ರೋಕ್ ಹಾಗು 400 ಮೀಟರ್ ಪ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು 400×100 ಟಿ.ಎಂ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, 400 ಪ್ರೀ ಸ್ಟೈಲ್ ರಿಲೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
Sri Ramakrishna Gurukula Residential School ಕೃತಿಕ್ ಎಸ್. ಅವರು 50 ಮೀಟರ್ ಬೆಸ್ಟ್ ಸ್ಟ್ರೋಕ್ ನಲ್ಲಿ ಪ್ರಥಮ, 200 ಮೀ. ಬೆಸ್ಟ್ ಸ್ಟ್ರೋಕ್ ದ್ವಿತೀಯ, ಪ್ರೀ ಸ್ಟೈಲ್ ನಲ್ಲಿ ತೃತೀಯ, ಎರಡು ರಿಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಫ್ರೀ ಸ್ಟೈಲ್ ರೈಲು ಸಹ ಪ್ರಥಮ ಸ್ಥಾನ ಪಡೆದಿದ್ದಾರೆ .
ನಿತೀಶ್ ಆರ್. ಅವರು 100 ಮೀಟರ್ ಬ್ಯಾಕ್ ಸ್ಟ್ರೋಕ್ 200 ಮೀಟರ್ ಬ್ಯಾಕ್ ಸ್ಟ್ರೋಕ್, 400 ಮೀ. ಐಎಂ ರಿಲೇ, ಪ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು 200 ಮೀಟರ್ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹರ್ಷಲ್ ಜಿ.ಆರ್. ಅವರು 50 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಭುವನ್ ಕೆ. ಗೌಡ 50 ಮೀಟರ್ ಬ್ಯಾಕ್ ಸ್ಟ್ರೋಕ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸುಬ್ರಹ್ಮಣ್ಯ ಎಸ್. ನಾಯಕ್ 200 ಮೀಟರ್ ಫ್ರೀ ಸ್ಟೈಲ್ ನಲ್ಲಿ ಹಾಗೂ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ನಿಶ್ಚಿತ್ ಪಿ. 400 ಮೀ ಪ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ನಿರಂಜನ್ ಕೆ. ಆರ್. 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವಿಶಾಲ್ ಕೆ 200 ಮೀಟರ್ ಪ್ರೀ ಸ್ಟೈಲ್, ಹಾಗೂ 100 ಮೀಟರ್ ಪ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೋಕ್ಷಿತ್ ಎಸ್. ಯಾದವ್ ಅವರು 200 ಮೀಟರ್ ಬೆಸ್ಟ್ ಸ್ಟ್ರೋಕ್ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಹುಮಾನ ಪಡೆದು ವಲಯ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆ ಆಗುವ ಮೂಲಕ ಶಾಲೆಗೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ರಾಮಕೃಷ್ಣ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್, ಕಾರ್ಯದರ್ಶಿ ಶೋಭಾ ವೆಂಕಟರಮಣ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.
Sri Ramakrishna Gurukula Residential School ಶ್ರೀರಾಮಕೃಷ್ಣ ಗುರುಕುಲ ವಸತಿ ಶಾಲೆಗೆ ವಲಯಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ
Date:
