Shivaganga Yoga Center ದಿನಾಂಕ 5.10.2025 ನೇ ಭಾನುವಾರ ದಿಂದ 15 ದಿನಗಳ ಕಾಲ ಗೋಪಾಲಗೌಡ ಬಡಾವಣೆ, 100 ಅಡಿ ರಸ್ತೆಯಲ್ಲಿ ಇರುವ ಬಂಟರ ಭವನದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ. ಹಾಗೂ ಬಂಟರ ಯಾನೆ ನಾಡವರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ 15 ದಿನಗಳ ಉಚಿತ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಮಾನಸಿಕ ಒತ್ತಡ. ಉದ್ವೇಗ, ಖಿನ್ನತೆ, ಮಧುಮೇಹ, ರಕ್ತದೊತ್ತಡ. ಮೈಗ್ರೇನ್ ತಲೆನೋವು. ಬೆನ್ನು ಸೊಂಟ ನೋವು. ಥೈರಾಯಿಡ್ ಸಮಸ್ಯೆ ರಕ್ತ ಹೀನತೆ ಇನ್ನೂ ಅನೇಕ ಮನೋದೈಹಿಕ ಸಮಸ್ಯೆ ಇರುವವರಿಗೆ ಯೋಗದ ಮುಖಾಂತರ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗುವುದು.
ಗೋಪಾಲಗೌಡ ಬಡಾವಣೆ ಹಾಗೂ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆಕೊಳ್ಳಬೇಕೆಂದು ಶಿವಗಂಗಾ ಯೋಗ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ ವಿಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸುತ್ತಾರೆ. ಈ ಯೋಗ ಶಿಬಿರ ನಡೆಸಿಕೊಡುವವರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸಿವಿ ರುದ್ರಾರಾಧ್ಯ ಹಾಗೂ ಪರಿಣಿತ ಶಿಷ್ಯ ವೃಂದ ನಡೆಸಿ ಕೊಡಲಿದ್ದಾರೆ.
Shivaganga Yoga Center ಈ ಶಿಬಿರವನ್ನು ಬಂಟರ ಸಂಘದ ಅಧ್ಯಕ್ಷರಾದ
ಡಾ. ಎ. ಸತೀಶ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ ಅಧ್ಯಕ್ಷತೆಯನ್ನು ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾದ ಶ್ರೀ ಎಸ್ ರುದ್ರೇಗೌಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಂಟರ ಸಂಘದ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ನಿರ್ದೇಶಕರಾದ ದಿವಾಕರ್ ಶೆಟ್ಟಿ ಭಾಗವಹಿಸಲಿದ್ದಾರೆ.
