Lions Club Bhadravati ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಅಂಧತ್ವ ನಿವಾರಣ ವಿಭಾಗ ಶಿವಮೊಗ್ಗ ಹಾಗೂ ಲಯನ್ಸ್ ಕ್ಲಬ್ ಭದ್ರಾವತಿ ಶುಗರ್ ಟೌನ್ ಇವರ ಆಶ್ರಯದಲ್ಲಿ ಉಜ್ಜನೀಪುರದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉಜ್ಜನೀಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದು, ಒಟ್ಟು 170ಕ್ಕೂ ಹೆಚ್ಚು ರೋಗಿಗಳ ನೇತ್ರ ತಪಾಸಣೆ ನಡೆದು, ಅವರಲ್ಲಿ 65 ಮಂದಿಗೆ ಉಚಿತವಾಗಿ ಕನ್ನಡಕಗಳು ವಿತರಿಸಲಾಯಿತು. ಇನ್ನೂ ೩೨ ಮಂದಿಯನ್ನು ಉಚಿತ ಕಣ್ಣಿನ ಶಸ್ತçಚಿಕಿತ್ಸೆಗೆ ಗುರುತಿಸಿ ನೋಂದಾಯಿಸಲಾಗಿದೆ. ವಿವಿಧ ನೇತ್ರ ಸಮಸ್ಯೆಗಳಿಗಾಗಿ ನೇತ್ರ ತಜ್ಞರಿಂದ ವಿಶೇಷ ಚಿಕಿತ್ಸೆ ವ್ಯವಸ್ಥೆಯೂ ಕಲ್ಪಿಸಲಾಗಿತ್ತು.
Lions Club Bhadravati ಲಯನ್ಸ್ ಕ್ಲಬ್ ಭದ್ರಾವತಿ ಶುಗರ್‌ಟೌನ್ ಅಧ್ಯಕ್ಷ ಡಾ. ಗುರುರಾಜ್, ಕಾರ್ಯದರ್ಶಿ ತಮ್ಮೇಗೌಡ, ಖಜಾಂಚಿ ನಾಗರಾಜ್ ಇನ್ನಿತರರಿದ್ದರು. ಶಿವಮೊಗ್ಗ ಆಪ್ಟಿಕಲ್‌ನ ಮಾಲೀಕರಾದ ಲಯನ್ ಎನ್.ಟಿ ನಂದೀಶ್ ನೇತ್ರ ಶಿಬಿರ ಮತ್ತು ಕನ್ನಡಕ ವಿತರಣೆ ಮಾಡಿದರು.
Lions Club Bhadravati ಭದ್ರಾವತಿಯ ಉಜ್ಜನಿಪುರದಲ್ಲಿ 170 ಕ್ಕೂ ಹೆಚ್ಚು ಮಂದಿಗೆ ಉಚಿತ ನೇತ್ರ ತಪಾಸಣೆ
Date:
