Saturday, December 6, 2025
Saturday, December 6, 2025

Kateel Ashok Pai Memorial Institute ಗಾಂಧೀಜಿಯವರ ಸತ್ಯ,ಸಹಕಾರ, ಸಹೋದರತ್ವ, ಸ್ವಾವಲಂಬನೆ ಬಿಂಬಿಸಿದ ಗಾಂಧಿ ಜಯಂತಿ.

Date:

Kateel Ashok Pai Memorial Institute ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಹಾತ್ಮ ಗಾಂಧಿಯವರ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಆಡಳಿತಾಧಿಕಾರಿಗಳಾದ ಪ್ರೊ ರಾಮಚಂದ್ರ ಬಾಳಿಗಾ ಅವರು ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜೀವನ ಮೌಲ್ಯ ಹಾಗೂ ದೇಶ ಪ್ರೇಮದ ಕುರಿತು NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಮೋಹನ್ ಕುಮಾರ್ ಅವರು ಮಾತನಾಡಿದರು.

Kateel Ashok Pai Memorial Institute ಅಧ್ಯಕ್ಷತೆಯನ್ನು ವಹಿಸಿದ ಸಂಧ್ಯಾಕವೇರಿ ಅವರು “ಕರ್ನಾಟಕದಲ್ಲಿ ಗಾಂಧಿ” ಎಂಬ ಪುಸ್ತಕದಿಂದ ಗಾಂಧೀಜಿಯವರು ಭದ್ರಾವತಿಗೆ ಭೇಟಿ ನೀಡಿದ ಸಂಧರ್ಭದ ಕುರಿತ ಲೇಖನವನ್ನು ಓದಿ ಹೇಳಿದರು.

ವಿಧ್ಯಾರ್ಥಿಗಳು,ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿಗಳು ತನಮಯಿ ಹಾಗೂ ತಂಡದ ನೇತೃತ್ವದಲ್ಲಿ ಸುಶ್ರಾವ್ಯವಾಗಿ ಭಜನೆಗಳನ್ನು ಹಾಡಿದರು.
ತರುವಾಯ ಎಲ್ಲರೂ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಹಾತ್ಮಗಾಂಧಿಯವರ ಸತ್ಯ ,ಸಹಕಾರ,ಸಹೋದರತ್ವ, ಸ್ವಾವಲಂಬನೆ ಕುರಿತು ಅವಲೋಕನ ಹಾಗೂ ಅನುಭವ ಹೊಂದುವ ಕಾರ್ಯಕ್ರಮ ಇದಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...