State Roller Skating Association ಶಿವಮೊಗ್ಗ ಗೋಪಾಳದಲ್ಲಿರುವ ಕ್ರೀಡಾ ಸಂಕೀರ್ಣದ ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮಕ್ಕಳ ಪ್ರಕ್ರಿಯೆಯನ್ನು ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನಡೆಸಿತು. ಈ ಸಂದರ್ಭದಲ್ಲಿ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನಿಂದ ಪಾಲ್ಗೊಂಡಿದ್ದ 40 ಮಕ್ಕಳಲ್ಲಿ 22 ಮಕ್ಕಳು ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಗೆ ಆಯ್ಕೆಯಾದರು. State Roller Skating Association ಈ ಸಂದರ್ಭದಲ್ಲಿ ಸ್ಕೇಟಿಂಗ್ ಕ್ರೀಡಾಪಟುಗಳೊಂದಿಗೆ ರಾಜ್ಯ ಅಸೋಸಿಯೇಷನ್ ತೀರ್ಪುಗಾರರಾದ ಅನಿಲ್ ಕುಮಾರ್, ಮಲ್ಲಿಕಾರ್ಜುನ್, ಗಣೇಶ್, ರಾಜ್ಯ ಅಸೋಸಿಯೇಷನ್ ಸಹಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ತಂಡದ ಪ್ರಧಾನ ಕಾರ್ಯದರ್ಶಿ ಎಂ. ರವಿ, ಜಿಲ್ಲಾ ತಂಡದ ಅಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಪದಾದಿಕಾರಿಗಳು, ವಿವಿಧ ಗಣ್ಯರು, ಪೋಷಕರು, ಉಪಸ್ಥಿತರಿದ್ದರು.
State Roller Skating Association ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಗೆ ಶಿವಮೊಗ್ಗದಿಂದ 22 ಮಕ್ಕಳ ಆಯ್ಕೆ
Date:
