Friday, December 5, 2025
Friday, December 5, 2025

World Heart Day ಹೃದಯದ ಆರೋಗ್ಯಕ್ಕೆ ಮಹತ್ವ ನೀಡಿ.- ಡಾ.ಕೆ.ಎಸ್.ನಟರಾಜ್

Date:

World Heart Day ವಿಶ್ವ ಹೃದಯ ದಿನದ ಅಂಗವಾಗಿ ಶಿವಮೊಗ್ಗ ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ವಾಕಥಾನ್ ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಜನರು ವಾಕಥಾನ್ ನಲ್ಲಿ ಹೆಜ್ಜೆ ಹಾಕಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕೆ ಎಸ್ ನಟರಾಜ್ ಅವರು ಹೃದಯವು ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಸತತವಾಗಿ ಬಡೆದುಕೊಳ್ಳುತ್ತದೆ, ಸತತವಾಗಿ ಕಾರ್ಯನಿರ್ವಹಿಸುವ ಈ ಅಂಗಕ್ಕೆ ನಾವು ಕಾಳಜಿ ವಹಿಸುವುದು ಅತ್ಯವಶ್ಯಕ. ಇಂದಿನ ದಿನಮಾನಗಳಲ್ಲಿ ಸಣ್ಣ ಯುವ ವಯಸ್ಸಿನ ಯುವಕರು ಸಹ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ, ಎಂದರು.

ಹೃದಯದ ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡಿ ಅದು ಎಷ್ಟು ಸರಿಯಾಗಿ ಕೆಲಸ ಮಾಡುತ್ತದೆಯೋ ಅಷ್ಟು ಜೀವನ ಆರೋಗ್ಯಕರವಾಗಿರುತ್ತದೆ. ಹೃದಯದ ಸಮಸ್ಯೆಗಳಿಗೆ ಒತ್ತಡಮಯ ಜೀವನವು ಒಂದು ಕಾರಣವಾಗಿದ್ದು ಒತ್ತಡದಿಂದ ಹೊರಬನ್ನಿ, ಆರೋಗ್ಯಕರ ಜೀವನ ರೂಡಿಸಿಕೊಳ್ಳಿ, ನಿತ್ಯವೂ ವ್ಯಾಯಾಮ ಮಾಡಿ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಿ ಇದೆಲ್ಲವೂ ಮಾಡುವುದರಿಂದ ಹೃದಯವು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಒಳ್ಳೆಯ ಒತ್ತಡ ತಂತ್ರಗಳನ್ನು ಅಳವಡಿಸಿಕೊಳ್ಳಿ : ಡಾ. ಬಾಲಸುಬ್ರಮಣಿ ಆರ್

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸ ತಜ್ಞರಾದ ಡಾ. ಬಾಲಸುಬ್ರಮಣಿ ಆರ್ ಅವರು ಮಾತನಾಡಿ ಹತ್ತು ವರ್ಷಗಳ ಹಿಂದೆ ಅರವತ್ತು ವಯಸ್ಸಿನ ಹಿರಿಯರು ಬೈಪಾಸ್ ಶಸ್ತ್ರಚಿಕಿತ್ಸೆ ಗೆ ಒಳಗಾಗುತ್ತಿದ್ದರು, ಕೋವಿಡ್ ನಂತರ 30 ವರ್ಷ ವಯಸ್ಸಿನವರಲ್ಲಿಯೂ ಸಹ ಬೈಪಾಸ್ ಚಿಕಿತ್ಸೆಗೆ ಆಗುತ್ತಿರುವುದನ್ನು ನೋಡುತ್ತಿದ್ದೇವೆ.

ಕುಟುಂಬ ಹಾಗೂ ಸಮಾಜಕ್ಕೆ ಉಪಯೋಗಕಾರಿ ಯಾಗುವ ಸಮಯದಲ್ಲಿ ಯುವಕರು ಪಾರ್ಶ್ವ ವಾಯು, ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ತುಂಬಾ ಕಳವಳಕಾರಿಯಾಗಿದೆ, ಎಂದರು.

ಹೊಗೆ ಸೊಪ್ಪು ಸೇವನೆ, ಮದ್ಯಪಾನ, ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್ ಗಳು ಹೃದಯ ಸಂಬಂಧಿ ಕಾಯಿಲೆ ಉಂಟು ಮಾಡುತ್ತವೆ, ಇದಲ್ಲದೆ ಇಂದಿನ ಒತ್ತಡದ ಜೀವನ ಶೈಲಿಯೂ ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣ ಆದ್ದರಿಂದ ಧನಾತ್ಮಕ ವಾಗಿರುವ ಒತ್ತಡ ನಿರ್ವಹಣಾ ತಂತ್ರಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದಿನವೂ ಕನಿಷ್ಠ 45 ನಿಮಿಷ ವ್ಯಾಯಾಮ ನಡಿಗೆ ಅಥವಾ ಜಿಮ್ ನಲ್ಲಿ ಕಸರತ್ತು ಮಾಡುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಪೌಷ್ಟಿಕ ಆಹಾರ ಸೇವನೆ, ಒಳ್ಳೆಯ 6-8 ತಾಸು ನಿದ್ದೆಈ ರೀತಿಯ ಒಳ್ಳೆಯ ಆರೋಗ್ಯಕರ ಒತ್ತಡ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಒತ್ತಡದಿಂದ ಹೊರಬರುವುದಲ್ಲದೆ ಹೃದಯ ಆರೋಗ್ಯವು ಸಹ ಉತ್ತಮವಾಗಿರುತ್ತದೆ ಎಂದರು.

ನಿಮ್ಮ ನಂಬರನ್ನು ತಿಳಿದುಕೊಳ್ಳಿ, ಡಾ. ಶ್ರೀವತ್ಸ

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾಕ್ಟರ್ ಶ್ರೀ ವತ್ಸ ಎನ್‌.ಎಸ್. ಮಾತನಾಡಿ ಪ್ರತಿ ವರ್ಷ ಸೆಪ್ಟಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ನಿಮ್ಮ ಹೃದಯದ ಬಡಿತವನ್ನು ತಪ್ಪಿಸಿಕೊಳ್ಳಬೇಡಿ (Don’t Miss a Beat) ಎಂಬುದಾಗಿದೆ ಇದರ ಅರ್ಥ ಹೃದಯ ಸಂಬಂಧಿ ಲಕ್ಷಣಗಳನ್ನು ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂಬುದಾಗಿದೆ. ಹೃದಯ ಕಾಯಿಲೆ ಜಗತ್ತಿನಾದ್ಯಂತ ಉಂಟಾಗುತ್ತಿರುವ ಸಾವಿನ ಕಾರಣದಲ್ಲಿ ಪ್ರಥಮ ಸ್ಥಾನದಲ್ಲಿದೆ.

World Heart Day ಮೂರರಲ್ಲಿ ಒಂದು ಸಾವು ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾಗುತ್ತಿದೆ. ನಾಲ್ಕನೇ ಒಂದು ಭಾಗ ಹೃದಯಾಘಾತ 40 ವರ್ಷ ಒಳಗಿನವರಿಗೆ ಆಗುತ್ತಿದೆ ಎನ್ನಲಾಗುತ್ತದೆ, ಅರ್ಧದಷ್ಟು ಹೃದಯಾಘಾತ 50 ವರ್ಷ ವಯಸ್ಸಿನವರಿಗೆ ಆಗುತ್ತೆ ಎನ್ನಲಾಗುತ್ತದೆ ಇದು ತುಂಬಾ ಕಳವಳಕಾರಿ ಸಂಗತಿ, ಎಂದರು.

ಭಾರತೀಯರಲ್ಲಿ ಪಾಶ್ಚ್ಯಾತ್ಯರಿಗೆ ಹೋಲಿಸಿದರೆ ಹೃದಯ ಸಂಬಂಧಿ ಸಾವುಗಳು ಸಹ ಜಾಸ್ತಿ, 30-32 ವರ್ಷ ವಯಸ್ಸಿನ ಹೆಣ್ಣು ಮಕ್ಕಳಲ್ಲಿಯೂ ಸಹ ಹೃದಯಾಘಾತವಾಗಿ ಆಂಜಿಯೋ ಪ್ಲಾಸ್ಟಿ ಆದ ಉದಾಹರಣೆಗಳು ಸಹ ಇದೆ, ಎಂದರು.

ಹೃದಯಘಾತದ 5 ಲಕ್ಷಣಗಳನ್ನು ತಿಳಿಯಿರಿ

ಹೃದಯಾಘಾತದ 5 ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಂತೆ ಡಾ. ಶ್ರೀವತ್ಸ ಅವರು ಸಲಹೆ ನೀಡಿದರು.

ಎದೆಯ ಮಧ್ಯ ಭಾಗದಲ್ಲಿ ಉರಿ, ಗಂಟಲು ನೋವು, ಎದೆ ಭಾರವಾಗಿರೋದು, ನೋವು ಎಡಗೈ ಅಥವಾ ಬಲಗೈಗೆ ಹಬ್ಬಿರುವುದು ನಿರ್ಲಕ್ಷಿಸಬೇಡಿ. ವಾಕಿಂಗ್ ಮಾಡುವಾಗ ಅಥವಾ ನಡೆಯುವಾಗ ಸುಸ್ತಾದರೆ ನಿರ್ಲಕ್ಷ ವಹಿಸದೇ ಅದನ್ನು ತುರ್ತಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದರು.

ಇಂದಿನ ಜನರಲ್ಲಿ ಬೊಜ್ಜು ಸಹ ವ್ಯಾಪಕವಾಗಿ ಬಾಧಿಸುತ್ತಿದೆ. ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಪುರುಷರು ಅವರ ಸೊಂಟದ ಸುತ್ತಳತೆ 35 ಇಂಚಿಗಿಂತ ಜಾಸ್ತಿ ಇರದಂತೆ ನೋಡಿಕೊಳ್ಳುವುದು ಹಾಗೂ ಹೆಣ್ಣು ಮಕ್ಕಳು ತಮ್ಮ ಸೊಂಟದ ಸುತ್ತಳತೆ ೩೧ ಸಿಎಂ ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ತುಂಬಾ ಉತ್ತಮ. ಬಿಎಂಐ 25 ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ಹಾಗೂ ಯಾರು 25 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಇದ್ದಾರೋ ಅವರು ವರ್ಷಕ್ಕೊಮ್ಮೆ ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಕೊಳ್ಳುವುದು, ಎಚ್ ಬಿ ಎ 1ಸಿ ೬ ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ ಸಾಧ್ಯವಾದರೆ ಸಿಟಿ ಕೊರನರಿ ಅಂಜೀಯೋಗ್ರಾಮ್ ಮಾಡಿಸಿಕೊಳ್ಳುವುದು ಉತ್ತಮ. ರೋಗ ಬರದೇ ಇರುವಂತೆ ತಡೆಯುವುದು ರೋಗ ಬಂದ ನಂತರ ಚಿಕಿತ್ಸೆಗಿಂತ ಉತ್ತಮ ಎಂದರು.

ತಾಲೂಕ ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್‌, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಶ್ರೀ ವರ್ಗೀಸ್‌ ಪಿ ಜಾನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀ ಶೈಲೇಶ್‌ ಎಸ್‌. ಎನ್. ಶ್ರೀ ರಾಜಪ್ಪ ಅಸಿಸ್ಟಂಟ್‌ ಕಮಾಡೆಂಟ್‌ ಶಿವಮೊಗ್ಗ, ಡಾ.ಅಶ್ವಲ್‌ ಎ ಜೆ, ಡಾ. ವಿಕ್ರಂ ಎಂಜೆ, ಡಾ. ಅಜಿತ್‌ ಶೆಟ್ಟಿ, ವೈದ್ಯಕೀಯ ಅಧೀಕ್ಷಕರಾದ ಡಾ.ಚಕ್ರವರ್ತಿ ಸಂಡೂರ್‌, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು.

ವಾಕಾಥಾನ್‌ ನಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...