ಮಾಹಿತಿ ತಂತ್ರಜ್ಞಾನ ಕಾರ್ಪೊರೇಟ್ ವಲಯಗಳಲ್ಲಿ ಕೇವಲ ತಾಂತ್ರಿಕ ಪದವೀಧರರಿಗಷ್ಟೇ ಅಲ್ಲ ಸಾಮಾನ್ಯ ಪದವಿ ಡಿಪ್ಲೋಮೋದಾರರಿಗೂ ಉದ್ಯೋಗ ಅವಕಾಶಗಳು ಸಾಕಷ್ಟಿವೆ ಎಂದು ಲೇಕ್ ವ್ಯೂ ನ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಬಿಸಿಎ ಪ್ರಾಂಶುಪಾಲ ಡಾ. ಬಿ ವೀರಪ್ಪ ಹೇಳಿದರು.
Bapuji Institute of Hi-Tech Education ಅವರು ಕಾಲೇಜಿನ ಆವರಣದಲ್ಲಿ ಮಹಾ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಉದ್ಯೋಗ ಅವಕಾಶಗಳು ಕೇವಲ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಎಲ್ಲಾ ಅರ್ಹರಿಗೂ ಲಭ್ಯವಾಗಲಿ ಎಂಬ ದೃಷ್ಟಿಯು ಬಾಪೂಜಿ ವಿದ್ಯಾ ಸಂಸ್ಥೆಯ ದಾಗಿದೆ. ಈ ಮೇಳದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದಲೂ ಬಂದಿರುವ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು 15ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈ ಕ್ಯಾಂಪಸ್ ಡ್ರೈವಿಗೆ ಆಗಮಿಸಿವೆ ಎಂದು ಹೇಳಿದರು.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಂಪನಿಗಳ ಉದ್ಯೋಗ ಅವಕಾಶ, ಸ್ಪರ್ಧಾತ್ಮಕ ಅನುಭವ ದೊರೆತರೆ ಕಂಪನಿಗಳಿಗೆ ಸಮಯ ಮತ್ತು ಸಂಪನ್ಮೂಲದ ಉಳಿತಾಯವೂ ಆಗುತ್ತದೆ ಎಂದರು.
ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಹೆಚ್ ವಿ ವಿಶೇಷ ಆಹ್ವಾನಿತರಾಗಿದ್ದರು. ವರ್ಕ್ ಫಾಕ್ಸ್ ಟೆಕ್ ಕಂಪನಿಯ ಮೇನೇಜರ್ ಕಿರಣ್, ಶ್ರೀ ಸಾಯಿ ದೇವ್ ಎಂಪ್ಲಾಯರ್ಸ್ ಸಂಸ್ಥೆಯ ಮೆನೇಜರ್ ನಿಹಾಲ್ ಮಾತನಾಡಿ ಉದ್ಯೋಗ ಅವಕಾಶಗಳ ಬಗ್ಗೆ ವಿವರಿಸಿದರು.
-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು-
