Friday, December 5, 2025
Friday, December 5, 2025

Shivamogga City Corporation ದೇಶದಲ್ಲಿ ಶೇ 80 ಅರಣ್ಯ ಪ್ರದೇಶ , ಶೇ,20 ರಷ್ಟು ಜನವಸತಿ ಇತ್ತು, ಈಗ ತಿರುವು ಮುರುವಾಗಿದೆ- ಡಾ.ಎಲ್.ಕೆ.ಶ್ರೀಪತಿ

Date:

Shivamogga City Corporation ಭಾರತೀಯ ಸನಾತನ ಪರಂಪರೆಯಲ್ಲಿ ವೃಕ್ಷಗಳಿಗೆ ಬಹಳ ಪೂಜನೀಯ ಮತ್ತು ಮಹತ್ವದ ಸ್ಥಾನ ಇದೆ ಶ್ರೀಪತಿ
ಬೃಹತ್ ಪರಾಶರ ಸಂಹಿತೆಯಲ್ಲಿ ಬರುವ “ಅಶ್ವತ್ಥಮೇಕಂ ಪಿಚುಮಂದಮೇಕಂ ನಗ್ರೋಧಮೇಕಂ ದಶಚಿಂಚೀಣೀಕಂ. ಕಫಿತ್ಥ ಬಿಲ್ವಾ ಮಲಕೀ ತ್ರಯಂ ಪಂಚಾಮ್ರರೋಪಿ ನರಕಂ ನ ಪಶ್ಯೇತ್” ಅಂದರೆ, ಒಂದು ಆಶ್ವತ್ಥ, ಒಂದು ಬೇವಿನ ಮರ, ಒಂದು ಆಲ, ಅಥವಾ ಹತ್ತು ಹುಣಿಸೆ ಅಥವಾ ಮೂರು ಬಿಲ್ವ, ನಲ್ಲಿ ಮತ್ತು ನೇರಿಳೆ ಅಥವಾ ಐದು ಮಾವಿನ ಗಿಡಗಳನ್ನು ಯಾರು ನೆಡುವರೋ ಅವರಿಗೆ ನರಕ ಪ್ರಾಪ್ತಿಯಿಲ್ಲ” ಎಂದು ಹೇಳಿದರು. ಇಲ್ಲಿ ನರಕ ಎನ್ನುವುದನ್ನು ಇಲ್ಲಿ ಬೂಮಿಯ ಮೇಲೇ ಎಂದು ತಿಳಿದುಕೊಳ್ಳಬೇಕು ಎಂದು ಡಾ. ಶ್ರೀಪತಿ ಎಲ್.ಕೆ. ಸಂದರ್ಶಕ ಪ್ರಾದ್ಯಾಪಕರು, ಐಐಟಿ ಧಾರವಾಡ ಇವರು ತಿಳಿಸಿದರು. ಅವರು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಚರಿಸುತ್ತಿರುವ ದಸರಾ ಮಹೋತ್ಸವದ “ಪರಿಸರ ದಸರಾ ಅಂಗವಾಗಿ ಒಂದು ಸಾವಿರ ಬೃಹತ್ ಗಿಡ ನೆಡುವ ಕಾರ್ಯಕ್ರಮ ಉಧ್ಗಾಟಿಸಿ ಮಾತನಾಡಿದರು. ಮುಂದುವರೆದು ಭಗವಾನ್ ಬುಧ್ನ ಅನುಯಾಯಿಯಾಗಲು ಆರು ಗಿಡಗಳನ್ನು ನೆಟ್ಟು ಅವುಗಳನ್ನು ಪೂರ್ಣ ಬೆಳೆಯುವವರೆಗೆ ಪೋಷಿಸಬೇಕೆಂದು ಬುದ್ಧ ಹೇಳಿದ್ದನ್ನು ಉಲ್ಲೇಖಿಸಿ ಆಗ ನಮ್ಮ ದೇಶದಲ್ಲಿ ಶೇಕಡಾ 80 ಭಾಗ ಅರಣ್ಯ ಪ್ರದೇಶ ಇತ್ತು ಕೇವಲ ಶೇಕಡಾ 20 ಭಾಗ ಜನವಸತಿ ಇತ್ತು. ಈಗ ಅದು ತಿರುವು ಮುರುವು ಆಗಿದೆ. ಈಗಲಾದರೂ ನಾವು ಎಚ್ಚರಿಕೆ ವಹಿಸಿದ್ದರೆ ಜಾಗತಿಕ ತಾಪಮಾನ ಏರಿಕೆ ತಡೆಯಲು ಸಾಧ್ಯವಿಲ್ಲ. ಕೇವಲ ಗಿಡ ನೆಡುವ ಸಾಂಕೇತಿಕ ಕಾರ್ಯಕ್ರಮ ಇದು ಆಗಬಾರದು. ನೆಟ್ಟ ಗಿಡವನ್ನು ಕನಿಷ್ಠ ಮೂರು ವರ್ಷ ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಎಚ್ಚರಿಕೆ ನುಡಿಗಳನ್ನು ಆಡಿದರು.
Shivamogga City Corporation ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗಬಹಿಸಿದ್ದ, ಜಿಲ್ಲಾ ಕಾನೂನು ಸೇವಾ ಆಯೋಗದ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ರವರು ನಮ್ಮ ದೇಶದ ಪ್ರಥಮ ಮಹಿಳೆ, ಗೌರವಾನ್ವಿತ ರಾಷ್ಟ್ರಾಧ್ಯಕ್ಷೆ ಶ್ರೀಮತಿ ದ್ರೌಪಧಿ ಮುರ್ಮು ರವರ ಬಾಲ್ಯದ ಅನುಭವವನ್ನು ಉಲ್ಲೇಖಿಸುತ್ತಾ “ ಒರಿಸ್ಸಾಧ ಅವರ ಜನಾಂಗದಲ್ಲಿ ಮರವನ್ನು ಅನಿವಾರ್ಯವಾಗಿ ಕಡಿಯುವ ಸಂಧರ್ಭದಲ್ಲಿ ಅದಕ್ಕೆ ನಮಿಸುವ ಪರಿಪಾಠವಿದೆ ಅದು ಜೀವಂತ ಇದ್ದಾಗ ಪಶು ಪಕ್ಷಿ ಪ್ರಾಣಿಗಳಿಗೆ ಆಹಾರ ನೀಡಿದೆ, ಕಡಿದ ಮೇಲೂ ಅದು ನಮಗೆ ಆಹಾರ ಬೇಯಿಸಲು ಉಪಯೋಗವಾಗುತ್ತಿದೆ. ಹಾಗಾಗಿ ಅದಕ್ಕೆ ನಮಸ್ಕರಿಸುವುದು ನಮ್ಮ ಸಂಪ್ರದಾಯ” ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ “ ಪರಿಸರ ದಸರಾ ಕಾರ್ಯಕ್ರಮದ ಮುಖ್ಯಸ್ಥೆ ನಗರಪಾಲಿಕೆಯ ಅಭಿಯಂತರರಾದ ಶ್ರೀಮತಿ ತ್ರಿವೇಣಿ ಪರ್ಯಾವರಣ ಟ್ರಸ್ಟನ ಅಧ್ಯಕ್ಷರಾದ ಪ್ರೊ ಕುಮಾರಸ್ವಾಮಿ, ರೋಟೇರಿಯನ್, ಶ್ರೀ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...