World Heart Day ವಿಶ್ವ ಹೃದಯ ದಿನದ ಅಂಗವಾಗಿ, ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೆ. ೨೮ (ಭಾನುವಾರ) ದಂದು ವಾಕಾಥಾನ್ ಹಮ್ಮಿಕೊಂಡಿದೆ.
ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಈ ವಾಕಾಥಾನ್ ಗೆ ಶಿವಮೊಗ್ಗದ ಸಂಸದರಾದ ಶ್ರೀ ಬಿವೈ ರಾಘವೇಂದ್ರ ಅವರು ನೆಹರು ಮೈದಾನದಲ್ಲಿ ಬೆಳಿಗ್ಗೆ ೭ ಘಂಟೆಗೆ ಉದ್ಘಾಟಿಸಲಿದ್ದಾರೆ.
ಜಾಗೃತಿ ಜಾಥಾವೂ ನೆಹರು ಮೈದಾನದಿಂದ ಮಹಾವೀರ ಸರ್ಕಲ್, ಗೋಪಿ ಸರ್ಕಲ್, ಅಮೀರ ಅಹ್ಮದ್ ಸರ್ಕಲ್ ಮಾರ್ಗವಾಗಿ ನೆಹರೂ ರಸ್ತೆ, ಗೋಪಿ ಸರ್ಕಲ್, ಜೈಲ್ ಸರ್ಕಲ್, ಮಹಾವೀರ ಸರ್ಕಲ್ ತಲುಪಿ ತದನಂತರ ಕುವೆಂಪು ರಸ್ತೆಯ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನ ಆವರಣದಲ್ಲಿ ಅಂತ್ಯಗೊಳ್ಳಲಿದೆ.
World Heart Day ಶಿವಮೊಗ್ಗ ನಗರದ ನಾಗರಿಕರು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸುವಂತೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ ಜಾನ್ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
