Shivamogga Dasara ಶಿವಮೊಗ್ಗ ನಾಡಹಬ್ಬ ದಸರಾ ಮಹೋತ್ಸವ – 2025 ರ ವೈಭವವನ್ನು ಹೆಚ್ಚಿಸಲಿರುವ ಗಜಪಡೆಯು ಸಕರೆಬೈಲಿನಿಂದ ಆಗಮಿಸಿದ್ದು, ನಗರದ ವಾಸವಿ ಶಾಲೆಯ ಆವರಣದಲ್ಲಿ ಸಕಲ ಪೂಜಾ ಪುನಸ್ಕಾರಗಳೊಂದಿಗೆ ಹಾಗೂ ಗೌರವಪೂರ್ಣ ಸ್ವಾಗತದೊಂದಿಗೆ ಗಜಪಡೆಯನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಬರಮಾಡಿಕೊಂಡರು.
Shivamogga Dasara ಮೈಸೂರು ಹೊರತುಪಡಿಸಿ ಜಂಬೂಸವಾರಿ ವೈಭವವನ್ನು ಕಣ್ತುಂಬಿಕೊಳ್ಳಬಹುದಾದ ಏಕೈಕ ನಗರವೆಂದರೆ ಶಿವಮೊಗ್ಗ. ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಈ ಗಜಪಡೆಯು ಶಿವಮೊಗ್ಗ ದಸರಾಕ್ಕೆ ಶೋಭೆ ತಂದಿದ್ದು, ಶಿವಮೊಗ್ಗ ದಸರಾ ಮಹೋತ್ಸವವನ್ನು ಕೇವಲ ನಗರ ಮಟ್ಟದ ಹಬ್ಬವಲ್ಲದೆ, ರಾಜ್ಯದ ಸಾಂಸ್ಕೃತಿಕ ಅಸ್ತಿತ್ವವನ್ನು ಪ್ರತಿನಿಧಿಸುವ ಭವ್ಯ ನಾಡಹಬ್ಬವನ್ನಾಗಿ ರೂಪಿಸುತ್ತಿದೆ.
