ಲೇ:ಡಾ.ಸುಧೀಂದ್ರ ಪ್ರಧಾನ ಸಂಪಾದಕರು, ಕೆ ಲೈವ್ ನ್ಯೂಸ್
Dr. S.L. Bhyrappa ಈ ಫೋಟೋ ಬಗ್ಗೆ ಏನಾದರೂ ಹೇಳಿ ಅಂತ ಫೇಸ್ ಬುಕ್ ನೆನಪಿಸುತ್ತಲೇ ಇರುತ್ತದೆ.
ಈ ಫೋಟೋ ಬಗ್ಗೆ ಹೇಳುತ್ತಾ ಬರೆದರೆ ಅದು ಸೂರ್ಯನ ಪರಿಚಯ ಮಾಡುವ ಸಾಹಸ.
ಜ್ಞಾನಪೀಠ ..ಅವರ ಬಳಿ ಸುಳಿಯದೇ ತನಗೆ ತಾನೆ ಆತ್ಮವಂಚನೆ ಮಾಡಿಕೊಂಡಿದೆ.
ಅವರಿಗಿಂತ ಸುಮಾರಾದವರಿಗೆ
ಒಲಿಯಿತು. ಇದು ವಿಡಂಬನೆ.
ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪನವರ
” ಪರ್ವ” ಕಾದಂಬರಿ ನನಗೆ ನಮ್ಮ ಆಕಾಶವಾಣಿ ಪುಸ್ತಕ ಭಂಡಾರದಲ್ಲಿ ಸಿಕ್ಕಿತು. ಓದಿದೆ.
ಅದನ್ನ ನಾನು ಓದಿದೆ ಅನ್ನುವುದಕ್ಕಿಂತ ನಮ್ಮ ತಂದೆ
ಸು. ಎಪ್ಪತ್ತನೇ ವಯಸ್ಸಿನಲ್ಲಿ ಓದಿ
ಚನ್ನಾಗಿದೆ ಅಂದರು. ಅಲ್ಲಿಯವರೆಗೂ ಅವರು ಕಾದಂಬರಿಗಳ ಪುಟ ತೆರೆದವರೇ ಅಲ್ಲ.
ಪರ್ವ ಮುಗಿಯುವ ತನಕ ಆಸಕ್ತಿಯಿಂದ ಓದಿದರು.
ಅವರಿಬ್ಬರೂ ಈಗಿಲ್ಲ.
ಆದರೆ ಬರಹ ಮತ್ತು ಓದಿದ ಆಸಕ್ತಿ ಎರಡೂ ನನ್ನ ಮುಂದಿವೆ.
ಇದು ಭೈರಪ್ಪನವರ ಸಾಧನೆ. ನನ್ನಂತಹ ಅಸಂಖ್ಯರಿಗೆ ಈ ಅನುಭವ ಆಗಿದೆ ಅಂದುಕೊಳ್ಳುವೆ. ನಾನು ಪಿಯು ಹಂತದಲ್ಲೇ ದೂರ ಸರಿದರು ಓದಿದೆ. ಅದರ ಪ್ರಭಾವ ನನಗೆ ಬಹಳ ವರ್ಷ ಕಾಡಿತು. ಅವರ ಮುಂದಿನ ಕಾದಂಬರಿಗಳ ಬಗ್ಗೆ
ಓದುವಂತೆ ಮಾಡಿತು…..
ಹೆಚ್ಚು ಬರೆದರೆ…ಸುಮ್ಮನೆ ಒಣ ಒಣ ಅನ್ನಿಸಬಹುದು. ಪಿಎಚ್ ಡಿ ಮಹಾಪ್ರಬಂಧದ ಸಲುವಾಗಿ
ಮೈಸೂರಿಗೆ ಹೋದಾಗ ಅವರು ಊರಲ್ಲಿರಲಿಲ್ಕ. ಸಿಂಧುವಳ್ಳಿ ಅನಂತ ಮೂರ್ತಿ ಮಾತ್ರ ಸಿಕ್ಕರು.
ಆದರೆ ಅವರೊಂದಿಗೆ ಭದ್ರಾವತಿಯಲ್ಲಿ ಲಭಿಸಿದ ಸುಮಾರು ಎರಡು ಗಂಟೆ ಅವಧಿ ಮಾತಾಡುವ ಅವಕಾಶ ಮಾತ್ರ ಮರೆಯಲಾರೆ. ಪ್ರಭು ಅವರು ಭೈರಪ್ಪನವರ ಆಪ್ತರು, ಕಾದಂಬರಿ ಹಸ್ತಪ್ರತಿ ಹಂತದಲ್ಲೇ ಓದುತ್ತಿದ್ದ ಎಂ.ಎಸ್
ಕೆ.ಪ್ರಭು ಅವರು ನನಗೆ ಭೈರಪ್ಪನವರ ಪರಿಚಯ ಮಾಡಿಸಿ ಮನೆಗೆ ಕರೆದೊಯ್ದಿದ್ದರು.
Dr. S.L. Bhyrappa ಭೈರಪ್ಪನವರು ಶಿವಮೊಗ್ಗಕ್ಕೆ ಬಂದಾಗ ಅವರ ಭಾಷಣ ಕೇಳಿದ್ದೆ.
ಹೆಚ್ಚ ಮಾತಾಡಲಾಗಲಿಲ್ಲ ಅವರಿಗೆ.
ಕೋಟಿ ರೂ ನೀಡಿ ಹುಟ್ಟಿದೂರಿಗೆ
ರಾಜಕೀಯ ಲೇಪವಿಲ್ಲದೇ ಜೀವಜಲ ತುಂಬಿದ ನಿಮ್ಮ ಜನೋಪಾಕಾರಿ ವಿವೇಕ ಮಾದರಿಯಾಗಿದೆ ಸರ್.
ನನಗೆ ಇನ್ನೂ ಇಷ್ಟವಾದದ್ದು ನಿಮ್ಮ ತಿರುಗಾಟ. ಅಥೆಂಟಿಕ್ ಹಿನ್ನೆಲೆ ಬರಹ ವಸ್ತು ಸಾಮಗ್ರಿ ಕಲೆಹಾಕುವ ನಿಮ್ಮ ತೀವ್ರ ಆಸಕ್ತಿ ಮತ್ತು ಕುತೂಹಲ
..ಇರಲಿ…ಸರ್ ನಿಮಗೆ ಅಕ್ಷರ ಶ್ರದ್ಧಾಂಜಲಿ .
ನಿಮಗೆ ಕೋಟಿ ನಮನಗಳು…
