Shivamogga Dasara ಶಿವಮೊಗ್ಗ ದಸರಾ – 2025 ರ ಅಂಗವಾಗಿ ಇಂದು ಕೋಟೆ ಶಿವಪ್ಪ ನಾಯಕ ಅರಮನೆಯ ಐತಿಹಾಸಿಕ ಆವರಣದಲ್ಲಿ ‘ಕಲಾದಸರಾ’ ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ, ಚಿತ್ರಕಲಾ ಮತ್ತು ಕೊಂಬೆಗಳ ಪ್ರದರ್ಶನವನ್ನು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಉದ್ಘಾಟಿಸಿದರು.
ಈ ಪ್ರದರ್ಶನದಲ್ಲಿ ದಸರಾ ಹಬ್ಬದ ಸಾಂಸ್ಕೃತಿಕ ವೈಭವ, ಕನ್ನಡ ನಾಡಿನ ಐತಿಹಾಸಿಕ ಸ್ಥಳಗಳು, ಜನಪದ ಸಂಸ್ಕೃತಿ ಹಾಗೂ ಇಂದಿನ ಕಾಲದ ಕಲಾತ್ಮಕ ಅಭಿವ್ಯಕ್ತಿಗಳನ್ನು ಪ್ರತಿಬಿಂಬಿಸುವ ನೂರಾರು ಕಲಾಕೃತಿಗಳು ಅಲಂಕರಿಸಿವೆ.
ನಗರದ ಪ್ರತಿಭಾವಂತ ಕಲಾವಿದರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಛಾಯಾಗ್ರಾಹಕರು ತಮ್ಮ ಸೃಜನಶೀಲತೆಯನ್ನು ಪರಿಚಯಿಸಲು ಈ ವೇದಿಕೆ ಅನನ್ಯ ಅವಕಾಶ ಒದಗಿಸಿದೆ. ‘ಕಲಾದಸರಾ’ ಪ್ರದರ್ಶನವು ದಸರಾ ಸಂಭ್ರಮಕ್ಕೆ ಹೊಸ ಶೋಭೆ ತಂದು, ಕಲಾ ಪ್ರಿಯರಿಗೆ ಹಬ್ಬದ ಸಂಭ್ರಮದ ಜೊತೆ ಸೃಜನಾತ್ಮಕ ಲೋಕವನ್ನು ಅನುಭವಿಸುವ ವಿಶೇಷ ಅವಕಾಶ ನೀಡುತ್ತಿದೆ.
