Karnataka Media Academy Infosys Springboard CSR ಉಪಕ್ರಮದಡಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರಿಗೆ ತರಬೇತಿಯನ್ನು ಆಯೋಜಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಕುರಿತು ಕೆಲವು ಮಾಹಿತಿ:
• ಈ ತರಬೇತಿಯು ಮೂರು ದಿನಗಳ ಅವಧಿಯದ್ದಾಗಿದ್ದು, ಇನ್‌ಫೋಸಿಸ್‌ನ ನಿಗದಿತ ತರಬೇತಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.
• ಒಟ್ಟು ಮೂರು ಬ್ಯಾಚ್‌ಗಳಲ್ಲಿ ಈ ವರ್ಷ ತರಬೇತಿ ನಡೆಯಲಿದೆ. ಪ್ರತಿ ಬ್ಯಾಚ್‌ನಲ್ಲಿ 50 ಪತ್ರಕರ್ತರಿಗೆ ಅವಕಾಶ.
• ಒಂದು ಬ್ಯಾಚ್ ಮಹಿಳಾ ಆಯವ್ಯಯದಡಿ ಕೇವಲ ಪತ್ರಕರ್ತೆಯರಿಗೆ ಮಾತ್ರ ಆಯೋಜಿಸಲಾಗಿದೆ.
• ತರಬೇತಿಯ ಅವಧಿಯಲ್ಲಿ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.
• ಮೊದಲ ತಂಡದ ತರಬೇತಿಯು ಅಕ್ಟೋಬರ್ ಕೊನೆಯ ವಾರದಲ್ಲಿ ನಡೆಯಲಿದೆ. ಉಳಿದ ತಂಡಗಳ ತರಬೇತಿಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
• ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಮಾಧ್ಯಮ, ಎಐ ಬಳಕೆ ಹಾಗೂ ವ್ಯಕ್ತಿತ್ವ ವಿಕಸನ ಕುರಿತ ವಿಷಯಗಳಲ್ಲಿ ತರಬೇತಿ ನೀಡಲಾಗುವುದು.
• ತರಬೇತಿ ಕುರಿತು ಮಾರ್ಗಸೂಚಿಗಳನ್ವಯ ಸ್ವಯಂ ಮೌಲ್ಯಮಾಪನದ ನಂತರ ಪ್ರಮಾಣ ಪತ್ರ ವಿತರಿಸಲಾಗುವುದು.
• ಗೂಗಲ್ ಫಾರ್ಮ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
