Chamber Of Commerce Shivamogga ಆದಾಯ ತೆರಿಗೆ ಶಾಸನಬದ್ಧ ಆಡಿಟ್, ರಿಟರ್ನ್ ಫೈಲಿಂಗ್ ಮತ್ತು ಸೆಕ್ಷನ್ 12ಎಬಿ, 80ಜಿ ನೋಂದಣಿ ನವೀಕರಣಗಳಿಗೆ ಅಂತಿಮ ದಿನಾಂಕಗಳನ್ನು ವಿಸ್ತರಿಸುವಂತೆ ಆದಾಯ ತೆರಿಗೆ (ವಿನಾಯಿತಿ) ಪ್ರಧಾನ ಮುಖ್ಯ ಆಯುಕ್ತರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮನವಿ ಮಾಡಿದರು.
ಆದಾಯ ತೆರಿಗೆ ಲೆಕ್ಕಪರಿಶೋಧನಾ ವರದಿ, ಶಾಸನಬದ್ಧ ಆಡಿಟ್ ಮತ್ತು ರಿಟರ್ನ್ ಫೈಲಿಂಗ್ ಮತ್ತು ಸೆಕ್ಷನ್ 12ಎಬಿ, 80ಜಿ ನೋಂದಣಿಯ ನವೀಕರಣ ಫೈಲಿಂಗ್ ಗಡುವನ್ನು 2025ರ ಡಿಸೆಂಬರ್ 31ರವರೆಗೆ ವಿಸ್ತರಿಸಲು ಮನವಿ ಮಾಡಿದರು.
ದಿನಾಂಕ ವಿಸ್ತರಣೆ ನಿರ್ಧಾರವು ಹೆಚ್ಚಿನ ವಾಣಿಜ್ಯ, ಕೈಗಾರಿಕಾ, ಟ್ರಸ್ಟ್, ಲಾಭರಹಿತ ಸಂಸ್ಥೆ ಮತ್ತು ವೃತ್ತಿಪರರಿಗೆ ಅನುಕೂಲವಾಗುತ್ತದೆ. ಸರ್ಕಾರದ ನ್ಯಾಯಸಮ್ಮತೆ, ಸ್ಪಂದಿಸುವಿಕೆ ಮತ್ತು ವ್ಯವಹಾರವನ್ನು ಸುಲಭಗೊಳಿಸುವ ದೃಷ್ಟಿಕೋನದಲ್ಲಿ ಅವರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು.
ಆದಾಯ ತೆರಿಗೆ ಇಲಾಖೆ ಶಿವಮೊಗ್ಗ ವತಿಯಿಂದ ಕಿಮ್ಮನೆ ರೆಸಾರ್ಟ್ನಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಪ್ರಧಾನ ಮುಖ್ಯ ಆಯುಕ್ತ ಆದಾಯ ತೆರಿಗೆ ( ವಿನಾಯಿತಿ ) ಅರಿವು ಕಾರ್ಯಕ್ರಮದ ಸಭೆಯಲ್ಲಿ ಟ್ರಸ್ಟ್ ಮತ್ತು ಲಾಭ ರಹಿತ ಸಂಸ್ಥೆಗಳ ಕಾಯ್ದೆ ನಿಯಮಗಳ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಚರ್ಚಿಸಿದರು.
ಆದಾಯ ತೆರಿಗೆ ( ವಿನಾಯಿತಿ ) ಪ್ರಧಾನ ಮುಖ್ಯ ಆಯುಕ್ತ ಸುಧಾಂಶು ದಾರ್ ಮಿಶ್ರಾ, ಚಂಡಿಗಡದ ಜಯಶ್ರೀ ಶರ್ಮ ಹಾಗೂ ಬೆಂಗಳೂರಿನ ಜಿತೇಂದ್ರ ಕುಮಾರ್ ಅವರು ಟ್ರಸ್ಟ್ ಮತ್ತು ಲಾಭ ರಹಿತ ಸಂಸ್ಥೆಗಳ ಕಾಯ್ದೆ ನಿಯಮಗಳ ಆದಾಯ ತೆರಿಗೆಗೆ ಸಂಬಂಧಿಸಿದ ಅರಿವು ಕಾರ್ಯಕ್ರಮದ ಸಮಾಲೋಚನ ಸಭೆಯಲ್ಲಿ ಕರದಾತರು ಅನುಸರಿಸಬೇಕಾದ ಶಾಸನಬದ್ಧ ವಿಧಿ ವಿಧಾನಗಳ ಬಗ್ಗೆ ವಿವರಣೆ ನೀಡಿದರು.
Chamber Of Commerce Shivamogga ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಸಮಿತಿ ಚೇರ್ಮನ್ ಸಿ.ಎ.ಶರತ್, ನಿರ್ದೇಶಕ ಗಣೇಶ್ ಅಂಗಡಿ, ವಸಂತ್ ಹೋಬಳಿದಾರ್, ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತ್ ಕುಮಾರ್, ಅನೇಕ ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಅನೇಕ ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ತೆರಿಗೆ ಸಲಹೆಗಾರರು ಭಾಗವಹಿಸಿದ್ದರು.
