Vipra Self-Employment Direct Loan Scheme 2025-26ನೇ ಸಾಲಿನ ವಿಪ್ರ ಸ್ವಉದ್ಯಮ ನೇರಸಾಲ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ನೇರವಾಗಿ ಸಾಲ-ಸಹಾಯಧನ ಮಂಜೂರು ಮಾಡಲು ಉದ್ದೇಶಿಸಿದ್ದು, ಹಸುಸಾಕಾಣಿಕೆ, ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಫಲಾನುಭವಿಗಳಿಗೆ ಕನಿಷ್ಟ ರೂ.1.00 ಲಕ್ಷ ಹಾಗೂ ಗರಿಷ್ಟ ರೂ.2.00 ಲಕ್ಷಗಳ ಆರ್ಥಿಕ ನೆರವು ಒದಗಿಸಲಾಗುವುದು ಹಾಗೂ ಶೇ. 20% ಸಹಾಯಧನ ನೀಡಲಾಗುವುದು. ಉಳಿಕೆ ಮೊತ್ತಕ್ಕೆ ಶೇ 4% ವಾರ್ಷಿಕ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಮಹಿಳೆಯರಿಗೆ ಶೇ. 33% ಮತ್ತು ದಿವ್ಯಾಂಗದವರಿಗೆ ಶೇ. 5% ರಷ್ಟು ಮೀಸಲಾತಿ ನೀಡಲಾಗುವುದು.
Vipra Self-Employment Direct Loan Scheme ಅರ್ಜಿ ಸಲ್ಲಿಸಲು ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ (EWS ಪ್ರಮಾಣಪತ್ರ) ಹೊಂದಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, 18 ರಿಂದ 65 ವರ್ಷದೊಳಗಿರಬೇಕು. ಅರ್ಜಿದಾರರ ಆಧಾರ್ ನಂಬರ್ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆ ಸೀಡ್ ಆಗಿರಬೇಕು.
ಆಸಕ್ತ ಅರ್ಹ ಬ್ರಾಹ್ಮಣ ಸಮುದಾಯದವರು ಲಿಂಕ್ https://ksbdb.co.in/Loan/ www.ksbdb.karnataka.gov.in/ ಮುಖಾಂತರ ಅಕ್ಟೋಬರ್ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಕೌಶ್ಯಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8029605888 ಮತ್ತು 8762249230 ಗಳನ್ನು ಹಾಗೂ Instagram & Facebook ಮೂಲಕ ಸಂಪರ್ಕಿಸಬಹುದಾಗಿದೆ.
Vipra Self-Employment Direct Loan Scheme ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ
Date:
