ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.
ದಿನದ ಒಳ್ಳೆಯಮಾತು (ನವರಾತ್ರಿಯ ಎರಡನೇ ದಿನ)
ಶರನ್ನವರಾತ್ರಿ(ಎರಡನೆಯದಿನ)
“ದಧಾನಾಂ ಕರಪದ್ಮಾಭ್ಯಾಂ
ಅಕ್ಷಮಾಲಾ ಕಮಂಡಲೂ/
ದೇವಿ ಪ್ರಸೀದತು ಮಯಿ
ಬ್ರಹ್ಮಚಾರಿಣ್ಯನುತ್ತಮಾ//
Klive Special Article ನವರಾತ್ರಿ ಎರಡನೇ ದಿನ “ಬ್ರಹ್ಮಚಾರಿಣಿ ದೇವಿ ಪ್ರಸೀದತು” ಮೊದಲನೆಯ ದಿನ ದೇವಿಯ ಶೈಲಪುತ್ರಿರೂಪದಿಂದ ಪೂಜಿಸಲ್ಪಡುತ್ತಾಳೆ.ಇಂದು ನವರಾತ್ರಿಯ ಎರಡನೇ ದಿವಸ.
ಎರಡನೆಯ ದಿನ ದೇವಿಯನ್ನು ಬ್ರಹ್ಮಚಾರಿಣಿ
ರೂಪದಲ್ಲಿ ಪೂಜಿಸಲಾಗುತ್ತದೆ.
ಜಗನ್ಮಾತೆಯನ್ನು ಬ್ರಾಹ್ಮೀ ಸ್ವರೂಪದಲ್ಲಿ
ನೋಡುವಬಗೆ,ಕಮಂಡಲುಧಾರಿಣಿ,ಅಕ್ಷಮಾಲೆ.ಸಪ್ತಮಾತೃಕೆಯರಲ್ಲಿ ಬ್ರಾಹ್ಮಿಯೂ ಒಬ್ಬಳೆಂದು ಗುರುತಿಸಲ್ಪಟ್ಟಿದ್ದಾಳೆ.ಬ್ರಹ್ಮಚಾರಿಣಿ ಎಂದರೆ ಸಂತೋಷ ಮತ್ತುಶಾಂತ ಶಕ್ತಿಯನ್ನು ಹೊಂದಿರುವ ರೂಪ.ಮೋಕ್ಷವನ್ನು ಬಯಸಿಅಥವಾ ಕಾರ್ಯಗಳ
ವಿಮೋಚನೆಗೆ ಬಯಸಿ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿ ಆರಾಧಿಸಿದರೆದೇವಿ ಅನುಗ್ರಹ ಮಾಡುವಳು.
ಪ್ರಜಾಪತಿ ದಕ್ಷನಿಂದ ತನ್ನ ಪತಿ ಶಿವನು ಅವಮಾನಿತ
ಗೊಂಡಾಗ,ಸತಿಯಾಗಿ ಮರುಜನ್ಮ ಪಡೆದುಮತ್ತೆ ಶಿವನನ್ನೇ ವರಿಸಲು ಬ್ರಹ್ಮಚಾರಿಣಿಯಾಗಿ ಅವತರಿಸಿದ ರೂಪವೇ ಬ್ರಹ್ಮಚಾರಿಣಿ ದೇವಿ.
ಶಿವನನ್ನು ವಿವಾಹವಾಗಲು ದೀರ್ಘಕಾಲಬ್ರಹ್ಮಚಾರಿಣಿ
ಯು ಹಣ್ಣು-ಎಲೆ ಸೇವಿಸುತ್ತಾ ,ನಂತರ ಎಲ್ಲವನ್ನೂ ನಿಲ್ಲಿಸಿಬಹಳಕಠೋರವಾಗಿತಪಸ್ಸನ್ನುಆಚರಿಸುತ್ತಾಳೆ.ಈ ತಪಶಕ್ತಿಯಿಂದ ಶಿವನನ್ನು ಒಲಿಸಿಕೊಂಡು ವಿವಾಹವಾಗುವ ಅವತಾರವೇ ಬ್ರಹ್ಮಚಾರಿಣಿರೂಪ.
ಬಲಗೈಯಲ್ಲಿ ಜಪಮಾಲೆ,ಮತ್ತೊಂದು ಕೈಯಲ್ಲಿ ಕಮಂಡಲ ಹಿಡಿದು ನಿಂತ ಸ್ವರೂಪದಲ್ಲೇ ಬಹು ದೀರ್ಘಕಾಲತಪಸ್ಸನ್ನು ಆಚರಿಸಿ ತನ್ನನ್ನು ತಾನು ಶಿವನಿಗೆ ಅರ್ಪಿಸಿಕೊಂಡಿದ್ದರಿಂದ ಈ ದೇವಿಯನ್ನು ಅಪರ್ಣಾದೇವಿ ಎನ್ನುವ ಹೆಸರಿನಿಂದಲೂ ಕರೆಯಲಾಗಿದೆ.
Klive Special Article ನವರಾತ್ರಿ ಎರಡನೇ ದಿನ “ಬ್ರಹ್ಮಚಾರಿಣಿ ದೇವಿ ಪ್ರಸೀದತು” ಬ್ರಹ್ಮಚಾರಿಣಿಯ ರೂಪವು ಸಂತೋಷ ಮತ್ತು ಶಾಂತ
ಸ್ವಭಾವದ ರೂಪವಾಗಿದೆ.ಕಠಿಣವಾದದ್ದನ್ನು ಅಭ್ಯಾಸ ಮಾಡಲು ಮೋಕ್ಷವನ್ನು ಪಡೆಯಲು ಅಥವಾ ಕಾರ್ಯ
ಸಾಧನೆಗಾಗಿ ಈ ಅವತಾರದಲ್ಲಿರುವ ದೇವಿಯನ್ನು ಪೂಜಿಸುವುದರಿಂದ ಒಳ್ಳೆಯದಾಗುತ್ತದೆಂಬ ನಂಬಿಕೆಯಿದೆ.ದೇವಿಯನ್ನು ಆರಾಧನೆ ಮಾಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾಳೆ.ಬ್ರಹ್ಮಚಾರಿಣಿ ದೇವಿಯನ್ನು ಆರಾಧನೆ ಮಾಡುವುದು ತಪಸ್ಸು ಮಾಡಿದಷ್ಟೇ ಪುಣ್ಯವನ್ನು ತಂದು ಕೊಡುತ್ತದೆ.
ಬ್ರಹ್ಮಚಾರಿಣಿಯ ಈ ಅವತಾರದಲ್ಲಿ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲುವನ್ನು ಹಿಡಿದಿರುವ ದುರ್ಗೆಯ ರೂಪವನ್ನು ಕಾಣಬಹುದು.
ದೇವಿಗೆ ಪ್ರಿಯವಾದ ಬಣ್ಣ ಹಸಿರು ಬಣ್ಣ.
ದೇವಿಯಎರಡನೆಯಅವತಾರವಾದಬ್ರಹ್ಮಚಾರಿಣಿದೇವಿಯನ್ನು ಭಕ್ತಿಯಿಂದ ಆರಾಧಿಸಿ,ಪೂಜಿಸಿ ದೇವಿಯ ಅನುಗ್ರಹ ಪಡೆಯೋಣ.
