JCI Institute ಸಮಾಜಮುಖಿ ಚಟುವಟಿಕೆಗಳಲ್ಲಿ ಜೆಸಿಐ ಸಂಸ್ಥೆ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.
ಶಿವಮೊಗ್ಗ ನಗರದ ಶ್ರೀ ವಿಧಾತ್ರಿ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಆಯೋಜಿಸಿದ್ದ ಕಮಲ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಜತೆಯಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಇದರಿಂದ ಇತರರಿಗೂ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
ಈಶ್ವರ್ ಬೂದಾಳ್ ಅವರ ಸೇವೆ ಸಮಾಜದಲ್ಲಿ ಬಹಳಷ್ಟು ಇದ್ದು, ಉದ್ಯಮದಲ್ಲಿ ಬಹಳ ವಿಶೇಷವಾದ ಸಾಧನೆ ಮಾಡಿ ಅಪಾರ ಜನ ಮೆಚ್ಚುಗೆ ಪಾತ್ರರಾಗಿದ್ದಾರೆ. ಅವರ ಸೇವೆಯೂ ಸಹ ತುಂಬಾ ಗಣನೀಯವಾಗಿದೆ ಎಂದು ತಿಳಿಸಿದರು.
JCI Institute ಜೆಸಿಐ ವಲಯ ಉಪಾಧ್ಯಕ್ಷ ಶೇಷಗಿರಿ ಮಾತನಾಡಿ, ವೃತ್ತಿಯ ಜೊತೆಗೆ ನಮ್ಮ ಪ್ರವೃತ್ತಿಯು ಬಹಳ ಮುಖ್ಯ. ಸಮಾಜದಲ್ಲಿ ನಮ್ಮ ವೃತ್ತಿಯಲ್ಲಿ ಸಾರ್ಥಕ ಸೇವೆ ಜೊತೆಗೆ ಮನುಕುಲದ ಸೇವೆಯು ಅಷ್ಟೇ ಪ್ರಮುಖ ಎಂದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಪ್ರತಿ ವರ್ಷ ಜೆಸಿಐ ಸಂಸ್ಥೆ ಈ ರೀತಿ ಯಶಸ್ವಿ ಉದ್ಯಮಿಗಳು ಹಾಗೂ ಸಮಾಜ ಸೇವಕರನ್ನು ಗುರುತಿಸಿ ನೀಡುತ್ತಿರುವ ಪ್ರತಿಷ್ಠಿತ ಇಂತಹ ಪ್ರಶಸ್ತಿಗೆ ಈಶ್ವರ್ ಬೂದಾಳ್ ಅವರು ಆಯ್ಕೆಯಾಗಿರುವುದು ತುಂಬಾ ಹೆಮ್ಮೆ ಎಂದು ತಿಳಿಸಿದರು.
ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸಮಾಜಮುಖಿಯಾಗಿ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ವಾಸವಿ ಯುವಜನ ಸಂಘದ ಅಧ್ಯಕ್ಷ, ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಉಪಾಧ್ಯಕ್ಷ, ಉದ್ಯಮಿ ಈಶ್ವರ್ ಬೂದಾಳ್ ಅವರಿಗೆ ಜೆಸಿಐ ಸಂಸ್ಥೆಯ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೆಸಿಐ ಪ್ರಮುಖರಾದ ಮಹದೇವಸ್ವಾಮಿ, ಸಂತೋಷ್, ವಿಜಯಕುಮಾರ್, ಇನ್ನರ್ ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ವೀಣಾ ಕಿಶೋರ್, ಹರೀಶ್, ಕರುಣಾಕರ್, ಶಿಲ್ಪಾ, ಸುಪ್ರಿಯಾ, ಉಮಾ, ಸಂಧ್ಯಾ ವಿಜಯಕುಮಾರ್ ಉಪಸ್ಥಿತರಿದ್ದರು.
JCI Institute ಈಶ್ವರ್ ಬೂದಾಳ್ ಅವರಿಗೆ ಜೆಸಿಐ ನಿಂದ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ
Date:
