Shiomga Dasara ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಸಾಹಸವನ್ನು ಪ್ರತಿಬಿಂಬಿಸುವ ನಾಡ ಹಬ್ಬ ದಸರಾ ನವರಾತ್ರಿ ಉತ್ಸವಕ್ಕೆ ನಗರದ ಕೋಟೆ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ಅವರು ವಿದ್ಯುಕ್ತ ಚಾಲನೆ ನೀಡಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕೋಟೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೂ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಬೆಳ್ಳಿಯ ಅಂಬಾರಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ಉದ್ದಕ್ಕೂ ವಿವಿಧ ಕಲಾ ತಂಡಗಳ ಪ್ರದರ್ಶನ ನಡೆಯಿತು. ವೇದಿಕೆ ಮೇಲೆ ಅಂಬಾರಿ ಹಾಗೂ ದೇವಿಯ ವಿಗ್ರಹವನ್ನು ಇಟ್ಟು ಮಹಾಮಂಗಳಾರತಿ ಎತ್ತುವ ಮೂಲಕ ದೇವಿಯ ಪ್ರತಿಷ್ಟಾಪನೆ ಮಾಡಲಾಯಿತು.
Shiomga Dasara ರಾಜ್ಯದ ಎರಡನೇ ಅತೀ ದೊಡ್ಡ ದಸರಾ ಮಹೋತ್ಸವ ಎಂದೇ ಖ್ಯಾತರಾದ ಶಿವಮೊಗ್ಗ ದಸರಾ ಮಹೋತ್ಸವದ ಪ್ರಯುಕ್ತ ಒಂಭತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಸರಾದ ಕೊನೆಯ ದಿನ ಮೈಸೂರು ದಸರಾದಂತೆ ಇಲ್ಲೂ ಕೂಡಾ ಮೂಲಕ ಅಂಬಾರಿಯನ್ನು ಮೆರವಣಿಗೆ ಮಾಡಿ ನಂತರ ನಗರ ಫ್ರೀಡಂ ಪಾರ್ಕ್ ನಲ್ಲಿ ಅಂಬು ಕಡಿಯುವ ಮೂಲಕ ದಸರಾ ಕೊನೆಗೊಳ್ಳಲಿದೆ.
