S. N. Channabasappa ರಾಜ್ಯ ಸರ್ಕಾರ ಸಮೀಕ್ಷೆಗೆ ಮುಂದಾಗಿ ಜಾತಿ ಗಣತಿ ನಡೆಸಲು ಉದ್ದೇಶಿಸಿದೆ ಆದರೆ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿಗೆ ಅಧಿಕಾರ ಇಲ್ಲ ಕೇಂದ್ರ ಸರ್ಕಾರ ಜನಗಣತಿಗೆ ಈಗಾಗಲೇ ನಿರ್ಧರಿಸಿದೆ ಆದರೆ ರಾಜ್ಯ ಸರ್ಕಾರ ತಾನು ಅಂದುಕೊಂಡದ್ದನ್ನು ಮಾಡುವುದಾಗಿ ಹೇಳಿದೆ. ಇದರಿಂದಾಗಿ ಮುಂದೆ ಸರ್ಕಾರ ಮಣ್ಣು ಮುಕ್ಕಲಿದೆ ಎಂದು ಶಾಸಕ ಚನ್ನಬಸಪ್ಪ ಹೇಳಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಜಾತಿಜನಗಣತಿ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಮಾತನಾಡಿದರು.
ಇದು ಹಿಂದೂ ರಾಷ್ಟ್ರ. ಹಿಂದೂಗಳು ಇಲ್ಲಿ ಬಹುಸಂಖ್ಯಾತರು ಇದನ್ನು ಒಡೆಯಲು ರಾಜ್ಯ ಸರ್ಕಾರ ಮುಂದಾಗಿದೆ ಹಾಗಾಗಿ ಗಣತಿ ವೇಳೆ ಎಲ್ಲರೂ ಹಿಂದೂ ಧರ್ಮ ಎಂದು ಬರೆಸಬೇಕು ಹಿಂದೂ ಜಾತಿಯನ್ನು ಕ್ರಿಶ್ಚಿಯನ್ ಮಾಡಲು ಹೊರಟಿದೆ
S. N. Channabasappa ಸರ್ಕಾರವೇ ಕ್ರಿಶ್ಚಿಯನ್ ಎಂದು ಬರೆಸಿ ಎಂದು ಪ್ರೇರೇಪಿಸುತ್ತಿದೆ ಈ ಮೂಲಕ ರಾಜ್ಯದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಮುಂದಾಗಿದೆ ಹಿಂದೂ ಸಮಾಜದ ಪ್ರತಿಯೊಬ್ಬರೂ ಧರ್ಮ ಕಾಲಂ ನಲ್ಲಿ ಹಿಂದೂ ಧರ್ಮ ಎಂದು ಹಾಗೂ ಜಾತಿಯ ಕಾಲಂ ನಲ್ಲಿ ತಮ್ಮ ಜಾತಿ ಹೆಸರನ್ನು ಬರೆಸಬೇಕು ಮಠಾಧೀಶರು, ಸಾಧು-ಸಂತರು ಈ ಬಗ್ಗೆ ಗಮನ ಹರಿಸಬೇಕು ರಾಜ್ಯ ಸರ್ಕಾರ ಸಮೀಕ್ಷೆ ಹೆಸರಿನಲ್ಲಿ ವ್ಯವಸ್ಥೆಯನ್ನು ಉಧ್ವಸ್ಥಗೊಳಿಸಲು ಹೊರಟಿದೆ ಹಾಗಾಗಿ ಹಿಂದೂ ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಹಿಂದೂ ಧರ್ಮದ ಜಾತಿ ಏಕೆ ಬೇಕು
ಸರ್ಕಾರ ನೇರವಾಗಿ ಮತಾಂತರಕ್ಕೆ ಬೆಂಬಲ ನೀಡುತ್ತಿದೆ ಈ ಮೂಲಕ ಅವರು ಪಕ್ಷದ ಹೈ ಕಮಾಂಡ್ ನ್ನು ತೃಪ್ತಿಪಡಿಸಲು ಹೊರಟಿದ್ದಾರೆ ಸಿಎಂ ರಾಜ್ಯದ ವಾತಾವರಣವನ್ನು ಹಾಳು ಮಾಡಲು ಹೊರಟಿದ್ದಾರೆ ಧರ್ಮ ಒಡೆಯುವ ಹುನ್ನಾರವನ್ನು ಸಿಎಂ ಹಾಗೂ ಕಾಂಗ್ರೆಸ್ ಮಾಡುತ್ತಿದೆ ಮೈಸೂರು ದಸರಾ ಉದ್ಘಾಟನೆ ವಿಷಯದಲ್ಲಿ ನಮ್ಮ ನಂಬಿಕೆಗೆ ನೋವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ನಡೆಯ ಬಗ್ಗೆ ಶಾಸಕ ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ
