Department of Youth Empowerment and Sports ಚಿತ್ರದುರ್ಗ ಜಿಲ್ಲಾಡಳಿತ ಜಿ.ಪಂ. ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ವುಷು ಆಯ್ಕೆಯಲ್ಲಿ ಭಾಗವಹಿಸಿದ್ದ ಶಿವಮೊಗ್ಗ ನಗರದ ರವೀಂದ್ರ ನಗರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯ ಕ್ರೀಡಾಪಟುಗಳು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ರಾಜ್ಯಮಟ್ಟದ ದಸರಾ ಪಂದ್ಯಾವಳಿ ಗೆ ಆಯ್ಕೆಯಾಗಿದ್ದಾರೆ.
ಚಾರ್ವಿ ಟಿ – 52 ಕೆಜಿ ವಿಭಾಗ, ದಾಕ್ಷಾಯಿಣಿ -೪೨ ಕೆಜಿ, ಭುವನ -೩೯ ಕೆಜಿ, ತೇಜಸ್ -೪೫ ಕೆಜಿ, ಚಂದನ -೪೬ ಕೆಜಿ ಹಾಗೂ ಅಮೃತ -೪೮ ಕೆಜಿ ವಿಭಾಗಗಳಲ್ಲಿ ಆಯ್ಕೆ ಯಾಗಿ ಮೈಸೂರಿನಲ್ಲಿ ನಡೆಯ ಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಪಡೆದಿದ್ದಾರೆ.
Department of Youth Empowerment and Sports ಆಯ್ಕೆಯಾದ ಕ್ರೀಡಾಪಟುಗಳಿಗೆ ಶಾಲೆಯ ಅಧ್ಯಕ್ಷ ಅನೂಪ್ ಎನ್. ಪಟೇಲ್, ಉಪಾಧ್ಯಕ್ಷೆ ರಾಗಿನಿ ಸಿಂಗ್ ಮತ್ತು ಶಾಲಾ ಮುಖ್ಯೋಪಾಧ್ಯಾ ಯಿನಿ ರೂಪಶ್ರೀ, ಪೂರ್ಣಿಮಾ, ತರಬೇತುದಾರರಾದ ಮುಕೆಬ್ ಅಹಮದ್, ದರ್ವೇಶ್ ಹಾಗೂ ಶಿಕ್ಷಕ ವೃಂದದವರು, ಸಿಬ್ಬಂಧಿಗಳು ಅಭಿನಂದಿಸಿದ್ದಾರೆ.
Department of Youth Empowerment and Sports ರಾಜ್ಯಮಟ್ಟದ ದಸರಾ ವುಷು ಸ್ಪರ್ಧೆಗೆ ಶಿವಮೊಗ್ಗ ನ್ಯಾಷನಲ್ ಶಾಲಾ ವಿದ್ಯಾರ್ಥಿಗಳ ಆಯ್ಕೆ
Date:
