Innerwheel Club Organization ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆಯು ವಿಶ್ವಾದ್ಯಂತ ಸೇವಾಕಾರ್ಯಗಳನ್ನು ನಡೆಸುತ್ತಿದೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಸೆಂಚುರಿ ಅಧ್ಯಕ್ಷೆ ಅನ್ನಪೂರ್ಣ ರಂಗರಾಜನ್ ಹೇಳಿದರು.
ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಸೆಂಚುರಿ ವತಿಯಿಂದ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಮಗುವಿನ ವಿದ್ಯಾಭ್ಯಾಸಕ್ಕಾಗಿ ಹತ್ತು ಸಾವಿರ ರೂ. ದೇಣಿಗೆ ನೀಡಿ ಮಾತನಾಡಿ, ಇನ್ನರ್‌ವ್ಹೀಲ್ ಸಂಸ್ಥೆಯು ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ನೆರವು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿ ಇರುವ ಮಕ್ಕಳಿಗೆ ಹಣಕಾಸಿನ ನೆರವು ಒದಗಿಸುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಸೆಂಚುರಿ ಕಾರ್ಯದರ್ಶಿ ಸುಮಾ ಸತೀಶ್ ಮಾತನಾಡಿ, ನಮ್ಮ ಕ್ಲಬ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳ ಜತೆಯಲ್ಲಿ ಆರೋಗ್ಯ ಜಾಗೃತಿ, ರಸ್ತೆ ಸುರಕ್ಷತೆ ಅರಿವು ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇನ್ನಷ್ಟು ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
Innerwheel Club Organization ಇದೇ ಸಂದರ್ಭದಲ್ಲಿ ಇಬ್ಬರು ಹಿರಿಯ ಶಾಲಾ ಶಿಕ್ಷಕರಾದ ರಾಘವೇಂದ್ರ ಪಾಟೀಲ್ ಮತ್ತು ಟಿ.ಜಯರಾಂ ಬೋವಿ ಅವರನ್ನು ಗೌರವಿಸಲಾಯಿತು. ಶೋಭಾ ರಾಣಿ, ಸುಮಾ ಹರಿಪ್ರಸಾದ್, ಉಮಾ ಅಮರ್, ಮೇಘ ಜೋಷಿ, ಆಶಾ ನಂದಿಶ್, ಪ್ರಿಯಾ ಮತ್ತು ಶಾಲೆಯ ಮುಖ್ಯಸ್ಥರಾದ ರಾಘವೇಂದ್ರ ಪಾಟೀಲ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
