Chamber Of Commerce Shivamogga ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಜೆಸಿಐ ಸಪ್ತಾಹದ ಅಂಗವಾಗಿ ನಗರದ ನೆಹರು ಕ್ರೀಡಾಂಗಣದಲ್ಲಿ ಜೆಸಿ ಸದಸ್ಯರಿಗೆ ಹಾಗೂ ಸದಸ್ಯರಲ್ಲದವರಿಗೆ ವಲಯದ ಎಲ್ಲ ಜೆಸಿಐಗಳಿಂದ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯು ಮನುಷ್ಯನ ಮನಸ್ಸನ್ನು ವಿಕಸನಗೊಳಿಸುತ್ತದೆ ಹಾಗೂ ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬುತ್ತದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಪ್ರತಿನಿತ್ಯ 24 ಗಂಟೆಗಳಲ್ಲಿ ಒಂದು ಗಂಟೆಯಾದರೂ ಸಹ ನಮ್ಮ ಆರೋಗ್ಯಕ್ಕಾಗಿ ಸಮಯ ಮೀಸಲಿಡಬೇಕು. ಇದರಿಂದ ಸದಾ ನಾವು ಆರೋಗ್ಯದಿಂದ ಇರುತ್ತೇವೆ ಎಂದು ಹೇಳಿದರು.
ಜೆಸಿಐ ವಲಯ ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, ಕ್ರೀಡೆ ಪರಸ್ಪರರಲ್ಲಿ ಸ್ನೇಹ ವಿಶ್ವಾಸ ಪ್ರೀತಿಯನ್ನು ವೃದ್ಧಿಸುತ್ತದೆ. ನಮ್ಮ ಜೆಸಿ ಸಂಸ್ಥೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರು ಸಹ ಇದ್ದಾರೆ. ಇಂತಹ ಕ್ರೀಡೆಗಳಿಂದ ಅವರಿಗೆ ಉತ್ಸಾಹ ಮೂಡುತ್ತದೆ. ಪ್ರತಿಯೊಬ್ಬ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ತಿಳಿಸಿದರು.
Chamber Of Commerce Shivamogga ಜೆಸಿಐ ಸಂಸ್ಥೆಯ ಪ್ರಮೋದ್ ಶಾಸ್ತ್ರಿ. ಸುದರ್ಶನ್, ವಿನೀತ್, ಮೋಹನ್, ನವೀನ್, ಜೆಸಿಐ ಸಹ್ಯಾದ್ರಿ ಘಟಕದ ಗಣೇಶ್ ಕ್ರೀಡಾಕೂಟದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಜೆಸಿಐನ ರೇಖಾ ರಂಗನಾಥ್, ಪೂರ್ಣಿಮಾ ಸುನಿಲ್ ಹಾಗೂ ಜೆಸಿಐನ ಎಲ್ಲಾ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
