Mangalore Institute of Oncology ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ನಗರದಲ್ಲಿ ಕ್ಯಾನ್ಸರ್ ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭ 20.09.2025 ರ ಶನಿವಾರ ಬೆಳಿಗ್ಗೆ 9.30 ಕ್ಕೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹೋಟೆಲ್ ಮಥುರ ಪ್ಯಾರಡೈಸ್ ನೆಲ ಮಳಿಗೆ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. Mangalore Institute of Oncology ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿಶ್ರೀ ಚೆನ್ನಬಸಪ್ಪ, ಶಾಸಕರು, ಶಿವಮೊಗ್ಗ ವಿಧಾನ ಸಭಾ ಹಾಗೂ ಶ್ರೀ ಎನ್. ಗೋಪಿನಾಥ್, ಅಧ್ಯಕ್ಷರು, ನಮ್ಮ ಕನಸಿನ ಶಿವಮೊಗ್ಗ ಇವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಂ.ಐ.ಒ ಆಸ್ಪತ್ರೆಯ ಮತ್ತು ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ನ ನಿರ್ದೇಶಕರಾದ ಡಾ. ಡಿ.ಸುರೇಶ್ ರಾವ್ ವಹಿಸಲಿದ್ದಾರೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೇಂದ್ರದ ಸಂಯೋಜಕರಾದ ಅ.ನಾ.ವಿಜಯೇಂದ್ರ ರಾವ್ ಕೋರಿದ್ದಾರೆ
Mangalore Institute of Oncology ಸೆ.20. ಶಿವಮೊಗ್ಗದಲ್ಲಿ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಮಾಹಿತಿ ಕೇಂದ್ರದ ಉದ್ಘಾಟನೆ
Date:
