South Western Railway Mysore ನೈಋತ್ಯ ರೈಲ್ವೆ, ಮೈಸೂರು ವಿಭಾಗವು “ಸ್ವಚ್ಛತೆ ಹಿ ಸೇವಾ” ಅಭಿಯಾನದ ಚಟುವಟಿಕೆಗಳನ್ನು 17 ಸೆಪ್ಟೆಂಬರ್ 2025 ರಂದು ಆರಂಭಿಸಿದ್ದು, ಇದು 2 ಅಕ್ಟೋಬರ್ 2025 ರವರೆಗೆ ಮುಂದುವರಿಯಲಿದೆ.
ಈ ಅಭಿಯಾನವನ್ನು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಮುದಿತ್ ಮಿತ್ತಲ್ ಅವರು ಸ್ವಚ್ಛತೆ ಪ್ರತಿಜ್ಞೆ ಮೂಲಕ ಆರಂಭಿಸಿದರು. ಕಾರ್ಯಕ್ರಮದ ಅಂಗವಾಗಿ ವಿಭಾಗದ ವಿವಿಧ ಸ್ಥಳಗಳಲ್ಲಿ ಶ್ರಮದಾನ ಚಟುವಟಿಕೆಗಳನ್ನು ನಡೆಸಲಾಯಿತು.
ಶ್ರೀ ಮುದಿತ್ ಮಿತ್ತಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಶ್ರೀ ಶಮ್ಮಾಸ್ ಹಮೀದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಹಿರಿಯ ಅಧಿಕಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಮೈಸೂರು ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಸ್ವಯಂಸೇವಾ ಸಂಸ್ಥೆಗಳು ಹಾಗೂ ಒಪ್ಪಂದದ ಸಿಬ್ಬಂದಿಗಳು ಪ್ರಮುಖ ರೈಲ್ವೆ ನಿಲ್ದಾಣಗಳು ಹಾಗೂ ಆವರಣದಲ್ಲಿ ಶ್ರಮದಾನದಲ್ಲಿ ಭಾಗವಹಿಸಿ, ಪ್ರಯಾಣಿಕರು ಮತ್ತು ನಾಗರಿಕರಿಗೆ ಸ್ವಚ್ಛ ಹಾಗೂ ಹಸಿರು ಪರಿಸರವನ್ನಾಗಿಸಲು ಕೈಜೋಡಿಸಿದರು.
South Western Railway Mysore ಬ್ರಹ್ಮ ಸಮಾಜ ಮೈಸೂರು, ರೋಟರಿ ಕ್ಲಬ್ & ಇನರ್ ಪೀಸ್ (ಅರಸೀಕೆರೆ), ಜಯಪ್ರಕಾಶ್ ನಾರಾಯಣ ಗ್ರಾಮೀಣ ಅಭಿವೃದ್ಧಿ ಸೇವಾ ಸಮಿತಿ (ಹಾಸನ), ಚೈತನ್ಯ ಗ್ರಾಮೀಣ ಅಭಿವೃದ್ಧಿ (ಶಿವಮೊಗ್ಗ), ಸಂಕಲ್ಪ ಸೇವಾ ಫೌಂಡೇಶನ್ (ದಾವಣಗೆರೆ), ಹಾಗೂ ರೋಟರಿ ಕ್ಲಬ್ (ಹಾವೇರಿ) ಮುಂತಾದ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಾಟಕಗಳು, ಜಾಗೃತಿ ಜಾತ ಮತ್ತು ಶ್ರಮದಾನ ಚಟುವಟಿಕೆಗಳನ್ನು ನಡೆಸಿ, ಸ್ವಚ್ಛತಾ ಸಂದೇಶ ಪ್ರಚಾರ ಮಾಡಿದರು.
ಈ ಅಭಿಯಾನವು ದೇಶವ್ಯಾಪಿ ಮುಂದಾಳತ್ವದಂತೆ ಸ್ವಚ್ಛತೆ, ಸಾರ್ವಜನಿಕರ ಭಾಗವಹಿಸುವಿಕೆ ಹಾಗೂ ಜಾಗೃತಿಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.
ಪೃಥ್ವಿ ಎಸ್. ಹುಲ್ಲತ್ತಿ
ವಿಭಾಗೀಯ ಹಣಕಾಸು ವ್ಯವಸ್ಥಾಪಕರು ಮತ್ತು
ಸಾರ್ವಜನಿಕ ಸಂಪರ್ಕ ಅಧಿಕಾರಿ
ಮೈಸೂರು ವಿಭಾಗ
