Chandragutti Renukamba Temple ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಸೆ.22 ರಿಂದ ಅ.02 ರವರೆಗೆ ದಸರಾ ಉತ್ಸವದ ಅಮ್ಮನವರ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಲು ಇಚ್ಛೆಯುಳ್ಳ ವಿವಿಧ ಕಲಾತಂಡಗಳಿAದ ಅರ್ಜಿ ಆಹ್ವಾನಿಸಿದೆ.
ಶ್ರೀ ರೇಣುಕಾ ಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ದೇವಿ ಪಾರಾಯಣ, ನವಗ್ರಹ ಜಪ, ಮೃತ್ಯುಂಜಯ ಜಪ, ಪವಮಾನ, ಶ್ರೀ ರೇಣುಕಾ ಸಹಸ್ರನಾಮ, ಶ್ರೀ ದುರ್ಗಾ ಸಹಸ್ರನಾಮ, ಲಲಿತಾ ಸಹಸ್ರನಾಮ ಪೂಜಾ ವಿಧಿಗಳನ್ನು ನಡೆಯುವುದು. Chandragutti Renukamba Temple ಅ. 02 ರಂದು ವಿಜಯದಶಮಿಯ ಬನ್ನ ಉತ್ಸವದಂದು ಅಮ್ಮನವರ ಪಲ್ಲಕ್ಕಿ ಮೆರವಣಿಗೆ ನಡೆಯುವುದರಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಇಚ್ಛೆಯುಳ್ಳ ವಿವಿಧ ಕಲಾತಂಡಗಳು ಸೆ. 18ರೊಳಗಾಗಿ ತಮ್ಮ ತಂಡದ ಹೆಸರು, ತಾವು ನೀಡಿರುವ ಕಾರ್ಯಕ್ರಮದ ಸಂಪೂರ್ಣ ವಿವರಗಳೊಂದಿಗೆ ಕಾರ್ಯನಿರ್ವಾಹಣಾಧಿಕಾರಿಗಳು, ಶ್ರೀ ರೇಣುಕಾಂಬ ದೇವಸ್ಥಾನ ಚಂದ್ರಗುತ್ತಿ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ ಇಲ್ಲಿ ಮನವಿ ಪತ್ರವನ್ನು ಸಲ್ಲಿಸುವುದು.
Chandragutti Renukamba Temple ಚಂದ್ರಗುತ್ತಿ ಅಮ್ಮನವರ ದಸರಾ ಉತ್ಸವಕ್ಕೆ ವಿವಿಧ ಕಲಾ ತಂಡಗಳಿಂದ ಅರ್ಜಿ ಆಹ್ವಾನ
Date:
