Rotary Club Shimoga ಶಿಕ್ಷಣ ಪ್ರತಿಯೊಬ್ಬರ ಜೀವನಕ್ಕೂ ಅವಶ್ಯಕ. ಶಿಕ್ಷಣವು ಜ್ಞಾನ, ಕೌಶಲ್ಯ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿರುತ್ತದೆ ಎಂದು ರೋಟರಿ ವಲಯ ತರಬೇತುದಾರ ಪ್ರೊ. ಎಚ್.ಎಂ.ಸುರೇಶ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಶಿಕ್ಷಣ ಮತ್ತು ಸಾಕ್ಷರತೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಸಾಕ್ಷರತೆಯು ವೈಯಕ್ತಿಕ ಬೆಳವಣಿಗೆ ಮತ್ತು ಸ್ವ ಅಭಿವ್ಯಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಳೆಸುತ್ತದೆ. ಸರ್ಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳು ಮೂಲಸೌಕರ್ಯ, ಶಿಕ್ಷಕರ ತರಬೇತಿ ಮತ್ತು ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡಬೇಕು. ವೈಯಕ್ತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮೂಲ ಶಿಕ್ಷಣ ಮತ್ತು ಸಾಕ್ಷರತೆ ನಿರ್ಣಾಯಕ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ವಿಶ್ವಾದ್ಯಂತ ಶಿಕ್ಷಣದ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ವಿಶ್ವದ ವಿವಿಧ ದೇಶಗಳಲ್ಲಿ ತಾಯಂದಿರಿಗೆ ಸಾಕ್ಷರತೆ ಮತ್ತು ಡಿಜಿಟಲ್ ಕೌಶಲ್ಯಗಳ ತರಬೇತಿ ನೀಡಲಾಗಿದೆ. ಮಕ್ಕಳ ಓದುವ ಸಾಮಾರ್ಥ್ಯ ವೃದ್ಧಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಮಾತನಾಡಿ, ನಮ್ಮ ವಲಯ ಅತಿ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವಲ್ಲಿ ಸುರೇಶ್ ಪ್ರೋತ್ಸಾಹಿಸಿದ್ದರು. ನಮ್ಮ ಸಂಸ್ಥೆ ವತಿಯಿಂದ ನಿರಂತರವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
Rotary Club Shimoga ಕಾರ್ಯಕ್ರಮದಲ್ಲಿ ವಲಯ ಸೇನಾನಿ ಕಿರಣ್ ಕುಮಾರ್ ಜಿ, ನಿಕಟಪೂರ್ವ ಕಾರ್ಯದರ್ಶಿ ಈಶ್ವರ್ ಬಿ ಅವರು ಮುಖ್ಯ ಅತಿಥಿಗಳಿಗೆ ಕ್ಲಬ್ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವ ಸಮರ್ಪಿಸಿದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಜಯಶೀಲ್ ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಆನಂದ್ ಎಸ್ ಜಿ ಮತ್ತು ಕ್ಲಬ್‌ನ ಎಲ್ಲಾ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
Rotary Club Shimoga ಶಿಕ್ಷಣವು ಜ್ಞಾನ, ಕೌಶಲ್ಯ & ಸಾಮಾಜಿಕ, ಆರ್ಥಿಕ ಸುಧಾರಿಸಲು ಸಹಕಾರಿ – ಪ್ರೊ.ಹೆಚ್.ಎಸ್.ಸುರೇಶ್
Date:
