Karnataka Science and Technology Academy ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ “ಸಂಶೋಧನಾ ವಿಧಾನ ಮತ್ತು ದತ್ತಾಂಶ ವಿಶ್ಲೇಷಣೆ” ವಿಷಯದ ಮೇಲೆ ದಿನಾಂಕ: 14/10/2025 ರಿಂದ 18/10/2025 ರವರೆಗೆ ಐದು ದಿನಗಳ ಕಾರ್ಯಾಗಾರವನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದ್ದು ಆಸಕ್ತ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು/ಪ್ರಾಧ್ಯಾಪಕರು ಭಾಗವಹಿಸಬಹುದಾಗಿದೆ.
ಆಸಕ್ತ ಪ್ರತಿನಿಧಿಗಳು ದಿನಾಂಕ: 13/10/2025ರೊಳಗಾಗಿ (Google form https://forms.gle/UNrBg9wiBzgQBMVD6) ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.
Karnataka Science and Technology Academy ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕ ಶ್ರೀನಿವಾಸು ವಿ.ಕೆ.. ವೈಜ್ಞಾನಿಕಾಧಿಕಾರಿ ಇವರನ್ನು (ಮೊ: 9620767819) ಸಂಪರ್ಕಿಸಬಹುದಾಗಿದೆ ಹಾಗೂ ಅಕಾಡೆಮಿಯ ವೆಬ್ ಸೈಟ್ – https://kstacademy.in ವೀಕ್ಷಿಸಬಹುದಾಗಿದೆ. ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್ ಅವರು ತಿಳಿಸಿದ್ದಾರೆ.
