Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಕೈಗಾರಿಕೆ ಪಿತಾಮಹ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಜನ್ಮಶತಾಬ್ದಿ ಆಚರಣೆ ಪ್ರಯುಕ್ತ ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರವೇಶದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.
ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡ ಶೆಟ್ಟಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿಗೆ ಮೂಲ ಕಾರಣಕರ್ತರು ಟಿ.ವಿ.ನಾರಾಯಣಶಾಸ್ತ್ರಿ ಎಂದರು. ಕೈಗಾರಿಕೋದ್ಯಮಿ ಎಸ್.ರುದ್ರೆಗೌಡ ಮಾತನಾಡಿ, ಶಿವಮೊಗ್ಗದಲ್ಲಿ ಫೌಂಡ್ರಿ ಕೈಗಾರಿಕೆಗಳು ಬೆಳೆಯಲು ಅವರ ಶ್ರಮ ಮತ್ತು ಮಾರ್ಗದರ್ಶನ ಸಹಕಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ ಮಾತನಾಡಿ, ನಿಜವಾದ ಕೈಗಾರಿಕಾ ಕ್ರಾಂತಿಯನ್ನು ಟಿ.ವಿ.ನಾರಾಯಣ ಶಾಸ್ತ್ರಿ ಅವರು ಪ್ರಾರಂಭಿಸಿದರು.
Chamber Of Commerce Shivamogga ಅವರು ಅನೇಕ ಯುವಕರನ್ನು ಸಾಮಾನ್ಯ ಇಂಜಿನಿಯರಿಂಗ್, ಆಟೋ ಸರ್ವಿಸ್, ಕೃಷಿ ಉಪಕರಣಗಳು, ಟೈರ್ ರಿಟ್ರೇಡಿಂಗ್, ಟ್ರ‍್ಯಾಕ್ಟರ್ ಟ್ರೈಲರ್ ನಿರ್ಮಾಣ, ಆಟೋ ಘಟಕಗಳು, ಫೌಂಡ್ರಿ ಘಟಕಗಳನ್ನು ಪ್ರಾರಂಭಿಸಲು ಪ್ರೇರೇಪಿಸಿದರು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಗಣೇಶ ಎಂ.ಅಂಗಡಿ, ಜಿ.ವಿ.ಕಿರಣ ಕುಮಾರ್ , ಕೆ.ಬಿ.ಶಿವಕುಮಾರ್, ರವಿ ಪ್ರಕಾಶ್ ಜೆನ್ನಿ, ಸಾಗರ ಕೈಗಾರಿಕಾ ವಸಾಹತು ಪ್ರದೇಶದ ಅಧ್ಯಕ್ಷ ಉಮೇಶ್ ಶಾಸ್ತ್ರಿ, ಕೈಗಾರಿಕಾ ಉದ್ಯಮಿ ಭೂಪಾಳಂ ಸತ್ಯನಾರಾಯಣ, ಮಾಜಿ ಅಧ್ಯಕ್ಷ ಡಿ.ಎಂ.ಶಂಕ್ರಪ್ಪ, ರಮೇಶ್ ಹೆಗ್ಡೆ, ಜೋಯಿಸ್ ರಾಮಾಚಾರ್, ಅನೇಕ ಕೈಗಾರಿಕೋದ್ಯಮಗಳು ಉಪಸ್ಥಿತರಿದ್ದರು.
