S.N.Chennabasappa ಹಲವು ದಿನಗಳ ಹಿಂದೆ ಕಿಡಿಗೇಡಿಗಳ ಕೃತ್ಯದಿಂದ ಶಿವಮೊಗ್ಗ ನಗರದ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿದ್ದ ದೇವರ ವಿಗ್ರಹಗಳು ಹಾನಿಗೊಳಗಾಗಿದ್ದವು. ಸ್ಥಳೀಯರ ಧೃಡ ಸಂಕಲ್ಪ ಮತ್ತು ಹಿಂದೂ ಸಮಾಜದ ಏಕತೆಯ ಶಕ್ತಿಯಿಂದ ದೇವಸ್ಥಾನವನ್ನು ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ದೇವಸ್ಥಾನದ ಹೊಸಲು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ದೇವಾಲಯದ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡು, ಇದು ಭಕ್ತರ ಆತ್ಮೀಯ ಶ್ರದ್ಧಾ ಕೇಂದ್ರವಾಗಿ ಹಾಗೂ ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಏಕತೆಯ ಸಂಕೇತವಾಗಿ ರೂಪಾಂತರಗೊಳ್ಳಲೆಂದು ಹಾರೈಸಿದರು.
S.N.Chennabasappa ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಬಸವರಾಜ್, ದೇವಾಲಯ ಸಮಿತಿ ಸದಸ್ಯರು, ಸ್ಥಳೀಯ ಪ್ರಮುಖರು ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದ
