ಲೇ: ಡಾ.ಅರವಿಂದ ತಿಮ್ಮಯ್ಯ.
ಪಾಸಿಟಿವ್ ಮೈಂಡ್.
ಶಿವಮೊಗ್ಗ.
Dr. Aravind S T ಮನೋವೈದ್ಯನಾಗಿ ಅನೇಕ ಕಡೆ ಆತ್ಮಹತ್ಯೆ ತಡೆಗಟ್ಟುವಿಕೆ ಬಗ್ಗೆ ಮಾತನಾಡುವಾಗ ಜನರು ಕೇಳುವ ಒಂದು ಸಾಮಾನ್ಯ ಪ್ರಶ್ನೆ _ಆತ್ಮಹತ್ಯೆ ಮಾಡಲು ನಿರ್ಧರಿಸಿರುವ ವ್ಯಕ್ತಿಯನ್ನು ಗುರುತಿಸುವುದು ಹೇಗೆ?
ಸಾಮಾನ್ಯವಾದ ಲಕ್ಷಣಗಳು
೧. ಹಿಂದಿನ ಲವಲವಿಕೆ ಕಳೆದುಕೊಳ್ಳುವುದು
೨. ಆತ್ಮಹತ್ಯೆ ಬಗ್ಗೆ ಮಾತನಾಡುವುದು
೩. ತಾನು ನಿಷ್ಪ್ರಯೋಜಕ ಹಾಗೂ ತನ್ನಿಂದ ಎಲ್ಲರಿಗೂ ತೊಂದರೆ ಎಂಬ ಭಾವನೆ
೪ ಅತಿಯಾದ ಪಾಪ ಪ್ರಜ್ಞೆ
೫. ಏಕಾಏಕಿ ಎಲ್ಲಾ ಗೆಳೆಯರು ,ಸಂಬಂಧಿಕರನ್ನು ಭೇಟಿಯಾಗಿ ಮಾತನಾಡಿಸಿ ಬರುವುದು ( ಕೊನೆಯ ವಿದಾಯ ಹೇಳಿದ ಹಾಗೆ,final 👋 final goodbye)
೬. ಏಕಾಏಕಿ ತನ್ನ ವಸ್ತುಗಳನ್ನು ಇತರರಿಗೆ ದಾನ ಮಾಡುವುದು ಹಾಗೂ ತನ್ನ ಆಸ್ತಿಯ ವಿಲ್ ಬರೆದಿಡುವುದು. Etc
ಆದರೆ ಇಲ್ಲಿ ನನ್ನ ಒಬ್ಬ ರೋಗಿ ತನ್ನ ಕುಟುಂಬದ ಫೋಟೋ ಆಲ್ಬಮ್ಗಳಲ್ಲಿ ತನ್ನ ಮುಖ ಚಯರೆಯನ್ನು ಕೆಂಪು ಬಣ್ಣದಿಂದ ಗೀಚಿ ತಾನು ಕುಟುಂಬದಿಂದ ದೂರ ಹೋಗುತ್ತಿದ್ದೇನೆ ಎಂಬ ಸೂಚನೆಯನ್ನು ನೀಡಿದ್ದ. ಆತ ತಾನು ಬದುಕುವುದರಲ್ಲಿ ಅರ್ಥ ಇಲ್ಲ ಎಂದು ಭಾವಿಸಿ ಆತ್ಮಹತ್ಯೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದ.
Dr. Aravind S T ಅವರ ಸಂಬಂಧಿಕರು ಇದನ್ನು ಗಮನಿಸಿ ನನ್ನ ಬಳಿಗೆ ಕರೆದುಕೊಂಡು ಬಂದರು, ಆತನನ್ನು ಪರೀಕ್ಷಿಸಿದಾಗ ಆತ ತೀವ್ರವಾದ ಖಿನ್ನತೆಯಿಂದ ಬಳಲುತ್ತಿದ್ದ , ಕುಟುಂಬದ ಆಸ್ತಿ ಕಲಹದ ವಿಚಾರವಾಗಿ, ತಾನು ಇಷ್ಟು ವರ್ಷ ದುಡಿದಿದ್ದು ನಿಷ್ಪ್ರಯೋಜನವಾಯಿತು ಎಂಬ ಅಸಹಾಯಕ ಮನೋಭಾವ ಮತ್ತು ಆತ್ಮಹತ್ಯೆ ಬಗ್ಗೆ ತುಂಬಾ ಸೀರಿಯಸ್ ಆಗಿದ್ದ.
ಆತನನ್ನು ನಾವು ಅಡ್ಮಿಟ್ ಮಾಡಿ ಬೇಕಾದ ಚಿಕಿತ್ಸೆ, ಕೌಟುಂಬಿಕ ಆಪ್ತ ಸಮಾಲೋಚನೆ, antidepressent ಮಾತ್ರೆಗಳು ಹಾಗೂ ವೈಯಕ್ತಿಕ ಆಪ್ತ ಸಮಾಲೋಚನೆಯನ್ನು ಮಾಡಿ, ಆತ್ಮಹತ್ಯೆಯ ಬಲೆಯಿಂದ ಹೊರಗೆ ತಂದವು .ಆ ವ್ಯಕ್ತಿಯಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಿ ,ಜೀವನದಲ್ಲಿ ಸಮಸ್ಯೆಗೆ ಸವಾಲಾಗಿ ನಿಲ್ಲಲು ಹುರಿದಿಂಬಿಸಿದವು.
ಇಂದು ಆ ವ್ಯಕ್ತಿ ಛಲದಿಂದ ಬದುಕುತ್ತಿದ್ದಾನೆ .ತನ್ನ ಕುಟುಂಬದೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದಾನೆ.
ಒಬ್ಬ ಮನೋವೈದ್ಯನಾಗಿ ಇದು ನನಗೆ ಅತ್ಯಂತ ತೃಪ್ತಿ ಕೊಡುವ ವಿಷಯ.
ಆತ್ಮಹತ್ಯೆಗಳನ್ನು ತಡೆಗಟ್ಟಬಹುದು , ಸಾರ್ವಜನಿಕರು ನೊಂದವರಲ್ಲಿ ಒಂದು ಭರವಸೆ ಮೂಡಿಸಿ, ಅಗತ್ಯ ಬಿದ್ದರೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಯನ್ನು ಕೊಡಿಸಿ.
