Brahma Kumaris University ಶಿಕ್ಷಕರು ದಿನವೂ ತಮ್ಮ ಜ್ಞಾನದಿಂದ ಜೀವನಕ್ಕೆ ದಿಕ್ಕನ್ನು ನೀಡುವ ಮಹಾನ್ ವ್ಯಕ್ತಿಗಳಾಗಿದ್ದಾರೆ. ಸಮಾಜದಲ್ಲಿ ಶಿಕ್ಷಕರ ಸೇವೆ ಅಮೂಲ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ನವುಲೆ ಶಾಖೆಯ ಸಂಚಾಲಕರಾದ ಬ್ರಹ್ಮಕುಮಾರಿ ಸ್ವಾತಿ ಅಕ್ಕನವರು ನುಡಿದರು.
ಅವರು ಸಮಾಜದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಎಲ್ಲಾ ಗಣ್ಯ ಮಹಾನ್ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದರು.
ತಮ್ಮ ಚಿಂತನೆ ಮತ್ತು ಮೌಲ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ನೀಡಿದ ಶಿಕ್ಷಕರು ಸದಾ ಸ್ಮರಣೀಯರು
ಸಹಜ ಜೀವನ ಮತ್ತು ಉನ್ನತ ಚಿಂತನೆಯ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಜೀವನದ ಸರಿಯಾದ ಮಾರ್ಗವನ್ನು ತೋರಿಸಿರುವ ಮತ್ತು ಜ್ಞಾನದೀಪವಾಗಿರುವ ಮೂಲಕ ಅವರ ಮಾರ್ಗವನ್ನು ಬೆಳೆಸುತ್ತಿರುವ ಹಾಗೂ ಪ್ರೀತಿ ಶಾಂತಿ ಸಹನಾಶೀಲತೆ ಪವಿತ್ರತೆ ಮತ್ತು ತ್ಯಾಗದಂತಹ ದೈವಿ ಗುಣಗಳಿಂದ ಜೀವನ ಪಾಠ ಶಾಲೆಯನ್ನು ಸುಗಂಧ ಭರಿತ ಮಾಡಿರುವ ಶಿಕ್ಷಕರ ಸೇವೆ ಅನನ್ಯ ಎಂದು ನುಡಿದರು.
Brahma Kumaris University ಇದೇ ಸಂದರ್ಭದಲ್ಲಿ ವಿವಿಧಡೆ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾಗಿರುವ 25ಕ್ಕೂ ಹೆಚ್ಚು ಜನ ಶಿಕ್ಷಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಮೂರ್ತಿ ಆರ್ಟ್ಸ್ ನ ಮಾಲೀಕರಾದ ರವಿ ಹಾಗೂ ಪೂಜ ಹ್ಯಾಂಡ್ ಲೂಮ್ಸ್ ನ ಮಾಲೀಕರಾದ ಅಶೋಕ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
