District Consumer Disputes Redressal Commission ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂ ಮೇದುಗೊಂಡನಹಳ್ಳಿಯ ಸುನೀಲ್ ಕುಮಾರ್ ಎಂ.ಎಸ್. ಎಂಬುವವರು ವ್ಯವಸ್ಥಾಪಕ ನಿರ್ದೇಶಕರು, ಓಲಾ ಎಲೆಕ್ಟ್ರಿಕ್ ಟೆಕ್ನಾಲಾಜಿಸ್ ಪ್ರೈ. ಲಿ., ಶಿವಮೊಗ್ಗ ಮತ್ತು ಬೆಂಗಳೂರು ಇವರ ವಿರುದ್ಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಓಲಾ ಎಲೆಕ್ಟ್ರಿಕ್ ಟೆಕ್ನಾಲಾಜಿಸ್ ಪ್ರೈ. ಲಿ., ಶಿವಮೊಗ್ಗ ಇವರಿಂದ ಸೆಪ್ಟಂಬರ್ 2023 ರಲ್ಲಿ ರೂ. 1,09,999/- ಬೆಲೆಯ ಓಲಾ ಎಸ್‌ಎಲ್ ಏರ್ ಮಿಡ್‌ನ್ಶೆಟ್ ಬ್ಲೂ ಸ್ಕೂಟರ್‌ನ್ನು ಖರೀದಿಸಿದ್ದು, ಮೂರು ವರ್ಷಗಳವರೆಗೆ ಬ್ಯಾಟರಿ ವಾರಂಟಿ ಹಾಗೂ ನಲವತ್ತು ಸಾವಿರ ಕಿ.ಮೀ.ರವರೆಗೆ ಬಿಡಿಭಾಗಗಳ ವಾರಂಟಿಯನ್ನು ಹೊಂದಿರುತ್ತದೆ. ಅಕ್ಟೋಬರ್ 2023ರಲ್ಲಿ ಈ ಸ್ಕೂಟಿ ರಿಪೇರಿಗೆ ಬಂದಿದ್ದು, ಶಿವಮೊಗ್ಗದ ಶಾಖೆಯಲ್ಲಿ ಪೇರಿ ಮಾಡಿಕೊಟ್ಟಿರುತ್ತಾರೆ. ಆದರೆ ಪುನಃ ಸಮಸ್ಯೆ ಬಂದಿದ್ದು, ಬಿಡಿ ಭಾಗಗಳನ್ನು ಬದಲಾಯಿಸಿದರು ಸಹ ಸರಿಯಾದ ರೀತಿಯಲ್ಲಿ ರಿಪೇರಿಯಾಗಿರುವುದಿಲ್ಲ. ವಾರಂಟಿ ಅವಧಿಯೊಳಗೆ ವಾಹನದಲ್ಲಿ ಸಮಸ್ಯೆಯಿರುವುದರಿಂದ ಸ್ಕೂಟಿಯ ಮೊತ್ತವನ್ನು ವಾಪಾಸು ನೀಡುವಂತೆ ನೋಟಿಸ್ ನೀಡಿದ್ದು, ಯಾವುದೇ ಉತ್ತರ ನೀಡಿರುವುದಿಲ್ಲವೆಂದು ಎದುರುದಾರರ ವಿರುದ್ಧ ಸೇವಾ ನ್ಯೂನತೆ ಎಸಗಿರುವುದಾಗಿ ತಿಳಿಸಿ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು, ತಮ್ಮ ವಕೀಲರ ಮೂಲಕ ಹಾಜರಾಗಿ ದೂರಿಗೆ ತಕರಾರು ಸಲ್ಲಿಸಿ, ಸ್ಕೂಟಿಯ ಬಿಡಿಭಾಗಗಳನ್ನು ಬದಲಾಯಿಸಿ ರಿಪೇರಿ ಮಾಡಿದ್ದರೂ ಸಹ ವಾಹನವನ್ನು ಪಡೆಯದೇ ಶಿವಮೊಗ್ಗ ಶಾಖೆಯ ಬಳಿಯಿರುತ್ತದೆ. ಆದ್ದರಿಂದ, ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವೆಂದು ತಿಳಿದು ಅರ್ಜಿಯನ್ನು ವಜಾ ಮಾಡಬೇಕೆಂದು ಕೋರಿರುತ್ತಾರೆ.
District Consumer Disputes Redressal Commission ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ವಾರಂಟಿ ಅವಧಿಯಲ್ಲಿ ಸರಿಯಾಗಿ ರಿಪೇರಿ ಮಾಡಿಕೊಡದೇ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, 1 ಮತ್ತು 2 ನೇ ಎದುರುದಾರರು ದೂರುದಾರರಿಗೆ ಸ್ಕೂಟಿಯ ಖರೀದಿ ಮೊತ್ತದ ಬೆಲೆಯಲ್ಲಿ ಜಿಎಸ್‌ಟಿ ಮೊತ್ತವನ್ನು ಕಳೆದು ರೂ. 1,03,413/- ಗಳಿಗೆ ಮೇ. 2025 ರಿಂದ ವಾರ್ಷಿಕ ಶೇ. 9 ರಂತೆ ಬಡ್ಡಿಯನ್ನು ಸೇರಿಸಿ ಈ ಆದೇಶವಾದ ದಿನಾಂಕದಿAದ 45 ದಿನಗಳೊಳಗಾಗಿ ಕೊಡುವುದು. ತಪ್ಪಿದ್ದಲ್ಲಿ ಶೆ. 12 ರಂತೆ ಬಡ್ಡಿಯನ್ನು ಪೂರ ಹಣ ನೀಡುವವರೆಗೂ ಪಾವತಿಸತಕ್ಕದ್ದು. ಹಾಗೂ ರೂ. 25,000/- ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತು ರೂ. 10,000/-ಗಳನ್ನು ದೂರುದಾರರಿಗೆ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಆ.25 ರಂದು ಆದೇಶಿಸಿದೆ.
District Consumer Disputes Redressal Commission ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ನಿಂದ ಸೇವಾನ್ಯೂನತೆ ಗ್ರಾಹಕರಿಗೆ ಪರಿಹಾರ ನೀಡಲು ಆದೇಶ
Date:
