ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣ್ ಗೌಡ ಎಂ.ಬಿ ಹೇಳಿದರು.
ವಿನೋಬನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ವಲಯ ಸೇನಾನಿ ಕಿರಣ್ ಕುಮಾರ್ ಜಿ ಅವರಿಂದ ಶಾಲೆಗೆ ಅಗತ್ಯವಿರುವ ಪ್ರೆಷರ್ ಪಂಪ್ ಕೊಡುಗೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಅಗತ್ಯ ಇರುವ ವಸ್ತುಗಳನ್ನು ರೋಟರಿ ಸಂಸ್ಥೆಯಿಂದ ಹೆಚ್ಚು ಪೂರೈಸಲಾಗುತ್ತಿದೆ. ನಮ್ಮ ರೋಟರಿಯ ಜಿಲ್ಲಾ ಕಾರ್ಯಕ್ರಮವಾದ ಸ್ವಚ್ಛತಾ ಕಾರ್ಯಕ್ರಮದ ಅಡಿಯಲ್ಲಿ ವಲಯ ಸೇನಾನಿ, ಎಸ್ ಬಿ ಎಸ್ ಬೋರ್ ವೆಲ್ಸ್ ನ ಕಿರಣ್ ಕುಮಾರ್.ಜಿ ಅವರು ಶಾಲೆಗೆ ಪ್ರೆಷರ್ ಪಂಪ್ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ರಮೇಶ್ ಮಾತನಾಡಿ, ಹಿಂದಿನಿಂದಲೂ ನಮ್ಮ ಶಾಲೆಗೆ ರೋಟರಿ ಸಂಸ್ಥೆಯವರು ಶಾಲೆಗೆ ಉಪಯುಕ್ತ ಕೊಡುಗೆಯನ್ನು ನೀಡುತ್ತಿದ್ದು, ಹೆಚ್ಚಿನ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಜಯಶೀಲಶೆಟ್ಟಿ, ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ನೆಪ್ಚೂನ್ ಕಿಶೋರ್ ಕುಮಾರ್, ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ್, ರೋಟರಿ ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಧಮೇಂದ್ರ ಸಿಂಗ್, ಚಂದ್ರು ಜೆಪಿ, ಸಂತೋಷ್ ಬಿ ಎ, ಈಶ್ವರ್ ಬಿವಿ, ಗೀತಾ ಜಗದೀಶ್, ಮೋಹನ್ ಕುಮಾರ್, ಬಲರಾಮ್, ಜಗದೀಶ್ ಜಿಎಸ್ ಹಾಗೂ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
