ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ ಶಿವಮೊಗ್ಗ, ಜಿಲ್ಲಾ ಸರ್ವೋದಯ ಮಂಡಲ ಇತ್ತೀಚೆಗೆ ಮಥುರಾ ಪ್ಯಾರಡೈಸ್ ನಲ್ಲಿ ಸಭೆ ಸೇರಿ ಮೂರು ವರ್ಷದ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಶ್ರೀ ಬಸವರಾಜಪ್ಪ ಕಂದಗಲ್ ವಹಿಸಿದ್ದರು. 2025 – 28 ರವರಿಗೆ ಈ ಕೆಳಗಿನ ಕಾರ್ಯಕಾರಿ ಸಮಿತಿ ರಚನೆಯಾಯಿತು. ಶ್ರೀ ಮನೋಹರ್ ಆಡಿಟರ್ ಇವರು ಅಧ್ಯಕ್ಷರಾಗಿ ಶ್ರೀ ಜಿ ವಿಜಯಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆಯಾದರು, ಇವರೊಟ್ಟಿಗೆ ಶ್ರೀ ಬಸವರಾಜಪ್ಪ ಕಂದಗಲ್ ಅವರು ಗೌರವಾಧ್ಯಕ್ಷರಾಗಿ ಮತ್ತು ಶ್ರೀ ಭಗವಂತ ರಾವ್ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಸಲಹಾ ಸಮಿತಿಯ ಸದಸ್ಯರಾಗಿ ಶ್ರೀ ಎಂ ಎನ್ ಸುಂದರರಾಜ್ ಶ್ರೀಮತಿ ರೇಣುಕಾ ಗಂಗಾಧರ್ ಆಯ್ಕೆಯಾದರು. ಹೊಸನಗರ ತಾಲೂಕು ಅಧ್ಯಕ್ಷರಾಗಿ ಶ್ರೀ ವಿಶ್ವೇಶ್ವರ ಮತ್ತು ಶಿಕಾರಿಪುರ ತಾಲೂಕ ಅಧ್ಯಕ್ಷರಾಗಿ ಸುಭಾಷ್ ಚಂದ್ರ ಸ್ಥಾನಕ್ ಇವರು ಸಲಹಾ ಸಮಿತಿಯ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ನೂತನ ಅಧ್ಯಕ್ಷರಾದ ಶ್ರೀ ಮನೋಹರ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಗಾಂಧೀಜಿಯವರ ಆದರ್ಶ ಮತ್ತು ತತ್ವಗಳನ್ನು ಶಾಲಾ ಮಕ್ಕಳಲ್ಲಿ ಪಸರಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಗೌರವಾಧ್ಯಕ್ಷ ಶ್ರೀ ಬಸವರಾಜಪ್ಪನವರು ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಎರಡು ಸರ್ವೋದಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಸ್ಮರಿಸಿದರು. ಅಲ್ಲದೆ ಹೊಸ ಸಮಿತಿಗೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷರಾಗಿ ಮನೋಹರ್ ಆಯ್ಕೆ
Date:
