ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ
- ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರುವ ಮತಾಂಧರಿಗೆ ಬೆಂಬಲ!
- ಭದ್ರಾವತಿಯಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗುವ ದೇಶದ್ರೋಹಿಗಳಿಗೆ ರಕ್ಷಣೆ!
- ಬಾಂಬ್ ಬ್ಲಾಸ್ಟ್ ಮಾಡುವ ಬ್ರದರ್ಸ್‌ಗಳಿಗೆ ಮನ್ನಣೆ!
- ಪ್ಯಾಲೆಸ್ಟೈನ್ ಧ್ವಜ ಹಾರಿಸುವ ದ್ರೋಹಿಗಳಿಗೆ ಮಣೆ!
- ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಶಾಂತದೂತರಿಗೂ ಆಶ್ರಯ!
S.N.Channabasappa ಇದಕ್ಕೆ ಆಡಳಿತವೆಂದುವುದಿಲ್ಲ, ಇದು ತುಷ್ಟೀಕರಣದ ಕಳಂಕಿತ ರಾಜಕೀಯ. ಸಿದ್ದರಾಮಯ್ಯ ಸರ್ಕಾರ ಇರುವವರೆಗೂ ಬ್ರದರ್ಸ್‌ಗಳ ನೆಮ್ಮದಿಗೆ ಭಂಗವಿಲ್ಲ, ಆದರೆ ಹಿಂದೂಗಳಿಗೆ ಉಳಿಗಾಲವಿಲ್ಲ. ಹಬ್ಬ, ಹರಿದಿನ, ಉತ್ಸವ, ಜಾತ್ರೆಗಳನ್ನು ಶಾಂತಿ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುವುದೇ ಅಸಾಧ್ಯ. ಜನರ ನಂಬಿಕೆ, ಭದ್ರತೆ ಮತ್ತು ಸಂಸ್ಕೃತಿಯ ಮೇಲೆ ನಡೆಯುತ್ತಿರುವ ಈ ದಾಳಿ, ರಾಷ್ಟ್ರದ ಭವಿಷ್ಯಕ್ಕೆ ಗಂಭೀರವಾದ ಅಪಾಯ!
ಮದ್ದೂರು ಗಣೇಶೋತ್ಸವದ ಸಂದರ್ಭದಲ್ಲಿ ಕೆಲ ಮತಾಂಧರು ನಡೆಸಿದ ಕಲ್ಲು ತೂರಾಟದ ಹೇಯ ಕೃತ್ಯವು ಭಕ್ತರ ಧಾರ್ಮಿಕ ಭಾವನೆಗಳನ್ನು ಮಾತ್ರವಲ್ಲ, ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನೂ ಗಂಭೀರವಾಗಿ ಕದಡಿದೆ. ಈ ದುರ್ಘಟನೆಯನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಧ್ವನಿ ಎತ್ತಿದ ಹಿಂದೂ ಸಮಾಜದ ಮೇಲೆ ಪೊಲೀಸರ ದೌರ್ಜನ್ಯ ನಡೆಸಿರುವುದು ಇನ್ನಷ್ಟು ಖಂಡನೀಯ ಸಂಗತಿಎಂದು ಎಸ್.ಎನ್. ಚೆನ್ನಬಸಪ್ಪನವರು ತಿಳಿಸಿದರು.
ಪಕ್ಷದ ಪ್ರಮುಖರೊಂದಿಗೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣಪತಿ ವಿಸರ್ಜನೆಯ ಭವ್ಯ ಶೋಭಾಯಾತ್ರೆಯಲ್ಲಿ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಘಟನೆ ನಡೆದ ಸ್ಥಳ ರಾಮ್ ರಹೀಮ್ ನಗರದ ಸುತ್ತಮುತ್ತಲಿನ ಪ್ರದೇಶಗಳಿಗೆ ಅವರು ಭೇಟಿ ನೀಡಿ, ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿ, ಘಟನೆ ವೇಳೆ ಗಾಯಗೊಂಡ ಅಜಯ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರು ಆರೋಗ್ಯವನ್ನು ವಿಚಾರಿಸಿದರು. ನಂತರ ಪ್ರತಿಭಟನೆಯಲ್ಲಿ ಲಾಟಿಚಾರ್ಜ್ ಗೆ ಗಾಯಗೊಂಡ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.
ರಾಜ್ಯ ಸರ್ಕಾರವು ತನ್ನ ಪಕ್ಷಪಾತಿ ಧೋರಣೆಯಿಂದ ಸಮಾಜದ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
