Saturday, December 6, 2025
Saturday, December 6, 2025

Kateel Ashok Pai Memorial College ಪೂರ್ವಸಿದ್ಧತೆಯಿಲ್ಲದೇ ಯೋಜನೆ ರೂಪಿಸಿದ ಕಾರಣ ಜೀವ ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ- ಡಾ.ಎಲ್.ಕೆ.ಶ್ರೀಪತಿ

Date:

Kateel Ashok Pai Memorial College ಮಾನಸ ಟ್ರಸ್ಟ್, ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು, ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ, ಕಿಡ್ಸ್ ಸಂಸ್ಥೆ, ಪರ್ಯಾವರಣ ಟ್ರಸ್ಟ್, ಶಿವಮೊಗ್ಗ,
ಐ.ಕ್ಯೂ.ಎ.ಸಿ ಘಟಕ, ಸಮಾಜ ಕಾರ್ಯ ವಿಭಾಗ, ಎನ್.ಎಸ್.ಎಸ್ ಘಟಕ, ಬಯೋಸ್ಪೆಕ್ಟ್ರಂಮ್ ಇವರ ಸಹಯೋಗದಲ್ಲಿ ನಾಡಿನ ಹೆಸರಾಂತ ಲೇಖರಾದ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಾಗೂ ಪ್ರಖ್ಯಾತ ಕಾದಂಬರಿ ಕರವಾಲೋ ಪ್ರಕಟವಾಗಿ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ 42ನೇ ಸಹ್ಯಾದ್ರಿ ದಿನಾಚರಣೆಯನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಸ್ವಾಮಿಯವರು ಪ್ರಾಸ್ತವಿಕ ನುಡಿಗಳನ್ನಾಡಿದರು. ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಲು ವಿದ್ಯಾರ್ಥಿಗಳು ಮತ್ತು ಹಲವಾರು ಸಂಘ ಸಂಸ್ಥೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗೆಯೇ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ. ಕಿಡ್ಸ್ ಸಂಸ್ಥೆ, ಪರ್ಯಾವರಣ ಟ್ರಸ್ಟ್, ಶಿವಮೊಗ್ಗ ಇವುಗಳ ಸಹಯೋಗದಲ್ಲಿ 42ನೇ ಸಹ್ಯಾದ್ರಿ ದಿನಾಚರಣೆಯನ್ನು ಆಚರಿಸುತ್ತಿದ್ದು ನಮಗೆಲ್ಲ ಪರಿಸರ ಸಂರಕ್ಷಣೆ ಆದ್ಯತೆಯಾಗಲಿ. ಆ ಮೂಲಕ ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಸಂರಕ್ಷಿಸಲ್ಪಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಎಲ್ ಕೆ ಶ್ರೀಪತಿ ವಿಶ್ರಾಂತ ಉಪ ಪ್ರಾಂಶುಪಾಲರು, ಎಓಓಅ ಇಂಜಿನಿಯರಿಂಗ್ ಕಾಲೇಜ್, ಶಿವಮೊಗ್ಗ, ಅತಿಥಿ ಉಪನ್ಯಾಸಕರು ಧಾರವಾಡ ಇವರು ಉದ್ಘಾಟಿಸಿ ಮಾತನಾಡಿದರು.

ಪಶ್ಚಿಮ ಘಟ್ಟವು ಜಗತ್ತಿನ ಎಂಟು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸಾವಿರಾರು ಪ್ರಭೇದಗಳ ಪ್ರಾಣಿ-ಪಕ್ಷಿ ಸಂಕುಲಗಳು ಒಟ್ಟಾಗಿ ಜೀವಿಸುತ್ತಿವೆ. ಸರ್ಕಾರದ ಹಲವಾರು ಕಾರ್ಯಯೋಜನೆಗಳು ಯಾವುದೇ ಪೂರ್ವಸಿದ್ಧತೆ ಇಲ್ಲದೆ ರೂಪಿಸಿ, ಈ ಜೀವ ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ಆ ಮೂಲಕ ಜೀವವೈವಿಧ್ಯತೆಯ ಅಸಮತೋಲನ ಸೃಷ್ಠಿ ಆಗುತ್ತಿದೆ. ಇದರಿಂದ ಪರಿಸರದ ಅಳಿವು ಹಾಗೂ ವೈಪರೀತ್ಯದಿಂದ ಹಲವಾರು ತೊಂದರೆಗಳಾಗುತ್ತಿವೆ. ಆದ್ದರಿಂದ ಈ ಪಶ್ಚಿಮ ಘಟ್ಟವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸರ್ಕಾರದ ಯೋಜನೆ ರೂಪಿಸುವವರು ಪಶ್ಚಿಮ ಘಟ್ಟಗಳ ಬಗ್ಗೆ ಅರಿವನ್ನು ಹೊಂದಿರುವವರು ಆಗಿರಬೇಕಾಗುತ್ತದೆ. ಯಾವುದೇ ಅಧ್ಯಯನ ಇಲ್ಲದೇ ಪಶ್ಚಿಮ ಘಟ್ಟಗಳಲ್ಲಿ ಸರ್ಕಾರ ಯೋಜನೆಗಳನ್ನು ಮಾಡುವುದರಿಂದ ಪರಿಸರ ನಾಶವಾಗುತ್ತದೆ. ಅಪೂರ್ವವಾದ ಪ್ರಾಣಿ-ಪಕ್ಷಿ ಸಂಕುಲಗಳು ನಾಶವಾಗುತ್ತವೆ. ಆದುದರಿಂದ ಸಂಘ-ಸಂಸ್ಥೆಗಳು, ಕಾಲೇಜುಗಳು ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಬೇಕಾಗುತ್ತದೆ. ಆ ಮೂಲಕ ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಅಪೂರ್ವವಾದ ಸಸ್ಯ-ಸಂಕುಲಗಳನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

Kateel Ashok Pai Memorial College ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಪರಿಸರದ ಅರಿವನ್ನು ಹೊಂದಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ನಮ್ಮ ಸುತ್ತ-ಮುತ್ತಲಿನ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ಇತರರಲ್ಲೂ ಕಾಳಜಿ ಮತ್ತು ಅರಿವನ್ನು ಮೂಡಿಸಬೇಕು. ಪರಿಸರ ಮತ್ತು ಅರಣ್ಯ ಸಂಪತ್ತನ್ನು ಕಾಪಾಡಬೇಕು ಹಾಗೂ ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿ ಪಾತ್ರವನ್ನು ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಾಧುರಿ ಕೆ ಆರ್ ಅವರು ವಂದಿಸಿದರು. ತೃತೀಯ ಸಮಾಜಕಾರ್ಯ ವಿಭಾಗದ ಕು. ಸ್ಪೂರ್ತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ಆಡಳಿತಾ ಮಂಡಳಿ ನಿರ್ದೇಶಕರಾದ ಡಾ. ರಜನಿ ಎ ಪೈ, ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ ಹಾಗೂ ಐ ಕ್ಯೂ ಎ ಸಿ ಸಂಯೋಜಕರಾದ ಡಾ. ಅರ್ಚನಾ ಭಟ್. ಉಪಸ್ಥಿತರಿದ್ದರು.

ಕು. ತನ್ಮಯಿ ಮತ್ತು ಸಂಗಡಿಗರು ಪ್ರಾರ್ಥನೆಯನ್ನು ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...