Department of School Education ಯೋಗ ಮತ್ತು ಚೆಸ್ ಒಂದು ದಿನಕ್ಕೆ ಸೀಮಿತವಾಗಬಾರದು,ದೈನಂದಿನ ಬದುಕಿನ ಅವಿಭಾಜ್ಯ ಕಾರ್ಯವಾಗಬೇಕು ಎಂದು ಅರುಣೋದಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಆಭಿಪ್ರಾಯ ಪಟ್ಟರು.
ಅವರು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ, ಹಾಗೂ ಅರುಣೋದಯ ಆಂಗ್ಲ ಮಾಧ್ಯಮ ಶಾಲೆ, ನವುಲೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಎ ಮತ್ತು ಬಿ ಅನುದಾನ ರಹಿತ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ಬಾಲಕ – ಬಾಲಕಿಯರ ಯೋಗ ಮತ್ತು ಚೆಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಕ್ರೀಡಾ ಪಟುಗಳಿಗೆ ಕರೆ ನೀಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಂದ್ರಕಾಂತ್ ಮಾತನಾಡಿ, ಕೇವಲ ಭಾರತವಲ್ಲದೇ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿಡೆ ಎಂದರು.
ಚದುರಂಗ ಭಾರತೀಯರಿಗೆ, ರಾಜ ಮಹಾರಾಜರ ಕಾಲದಿಂದಲೂ ಜನಪ್ರಿಯವಾದ ಕ್ರೀಡೆ, ಚದುರಂಗದಿಂದ ಏಕಾಗ್ರತೆ,ಶಿಸ್ತು, ಬುದ್ಧಿಮಟ್ಟ ವೃದ್ಧಿಯಾಗುತ್ತದೆ ಎಂದರು.
ಪ್ರತಿನಿತ್ಯ ಅರ್ಧಗಂಟೆ ಎಲ್ಲರೂ ಕೂಡ ಯೋಗಾಸನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ದಶಕದಿಂದೀಚೆಗೆ ಯೋಗದ ಮಹತ್ವ ಜನರಿಗೆ ಅರಿವಾಗಿದ್ದು, ಹೆಚ್ಚಿನ ಜನ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು, ಯೋಗಾಭ್ಯಾಸದ ಕಡೆಗೆ ಒಲವು ಹೊಂದಿದ್ದಾರೆ ಎಂದರು.
Department of School Education ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ.ತೀಮೇನಹಳ್ಳಿ, ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಚಂದ್ರಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.
