Dr. P. Boregowda ಡಾ. ಪಿ. ಬೋರೇಗೌಡ ಅವರ ಜೀವನಯಾನ, ಆಡಳಿತಾನುಭವ ಮತ್ತು ಕೃಷಿ-ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿದ ಮಹತ್ವದ ಸಾಧನೆಗಳನ್ನು ಒಳಗೊಂಡ ಪ್ರಮುಖ ಕೃತಿಗಳ ಮಹಾ ಬಿಡುಗಡೆ ಸಮಾರಂಭವು 2025ರ ಸೆಪ್ಟೆಂಬರ್ 13ರಂದು, ಶನಿವಾರ ಬೆಳಿಗ್ಗೆ 10.30ಕ್ಕೆ ಮೈಸೂರು ಕಲಾಮಂದಿರದಲ್ಲಿ ಜರುಗಲಿದೆ.
ಡಾ. ಬೋರೇಗೌಡ ಅವರು ತಮ್ಮ ಆಡಳಿತ ಸೇವೆಯಲ್ಲಿ ಅನುಷ್ಠಾನಗೊಳಿಸಿದ ಸುಧಾರಣಾ ಕ್ರಮಗಳು, ಆರೋಗ್ಯ ಕ್ಷೇತ್ರದಲ್ಲಿ ತರಲಾದ ನವೀನ ಪ್ರಯೋಗಗಳು, ನಿವೃತ್ತಿಯ ನಂತರ ಗ್ರಾಮೀಣ ನೆಲದಲ್ಲಿ ಕೈಗೊಂಡ ಕೃಷಿ ಪ್ರಯೋಗಗಳು ಹಾಗೂ ವ್ಯಕ್ತಿಗತ ಜೀವನದಲ್ಲಿ ಎದುರಿಸಿದ ಸಂಕಷ್ಟ-ಹೋರಾಟಗಳ ಕಥನಗಳನ್ನು ಈ ಕೃತಿಗಳು ಒಳಗೊಂಡಿವೆ.
ಇವು ಕೇವಲ ವ್ಯಕ್ತಿ ಜೀವನದ ನೆನಪಲ್ಲ. ಬದಲಾಗಿ ಆಡಳಿತ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಿಗೆ ದಾರಿ ತೋರಿಸುವ ದಾಖಲೆಗಳಾಗಿವೆ.
ಕರ್ನಾಟಕ ವಿಧಾನಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭಕ್ಕೆ ಶೋಭೆ ನೀಡಲಿದ್ದು, ಡಾ. ಎನ್.ಎಸ್. ರಾಮೇಗೌಡ, ಮಾಜಿ ಕುಲಪತಿ, ಕನ್ನಡ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
Dr. P. Boregowda ರಾಜ್ಯದ ಹಲವಾರು ಗಣ್ಯರು, ಸಾಹಿತ್ಯ-ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಹಾಗೂ ರೈತ-ಸಾಮಾನ್ಯರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
