Shimoga News ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ನಡೆದ ಹೊಳಲೂರು `ಬಿ’ವಲಯಮಟ್ಟದ ಕ್ರೀಡಾಕೂಟದಲ್ಲಿ ಕುಂಚೇನಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಅತೀಹೆಚ್ಚಿನ ಬಹುಮಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದ ವಿವಿಧ ಸ್ಫರ್ಧೆಗಳಲ್ಲಿ ದಕ್ಷಿತ, ದೀಪ್ತಿ, ಹೇಮಾವತಿ, ಅನುಷಾ, ವೈಷ್ಣವಿ, ಮೇನಕ, ಚೈತನ್ಯ, ವರ್ಷಿತಾ, ನೇಹಾ ಹಾಗೂ ಖೋ ಖೋದಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದಿದ್ದು, ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
Shimoga News ಬಾಲಕರ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಚಂದನ್, ಅಜಯ್, ಸಂದೀಪ, ನಿತೀನ್, ಉಲ್ಲಾಸ್, ನಿರಂಜನ್ ಬಹುಮಾನ ಪಡೆದುಕೊಂಡಿದ್ದಾರೆ. ಯೋಗಾಸನದಲ್ಲಿ 5 ಮಕ್ಕಳು ಪ್ರಥಮ, ಬಾಲಕರ ಖೋ ಖೋ, ವಾಲಿಬಾಲ್‌ನಲ್ಲಿ ಪ್ರಥಮ, ಕಬ್ಬಡ್ಡಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಚಂದನ್ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
Date:
