ಸುಸ್ಥಿರ ಆರ್ಥಿಕತೆಯು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯವಶ್ಯವಾಗಿದ್ದು ಪ್ರಾಚೀನ ಭಾರತದ ಅರ್ಥಶಾಸ್ತ್ರಗಳಲ್ಲಿ ಇದಕ್ಕೆ ಪೂರಕವಾದ ಅನೇಕ ಮೌಲ್ಯಯುತ ಅಂಶಗಳಿವೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು.
ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ, ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ವಿಷಯದ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರದ ಪ್ರೇರಣಾತ್ಮಕ ಉಪನ್ಯಾಸ ನೀಡುತ್ತಾ ಪ್ರಾಚೀನ ಭಾರತದ ಕೌಟಿಲ್ಯಾದಿ ಅರ್ಥಶಾಸ್ತ್ರಜ್ಞರ ಚಿಂತನೆಯಲ್ಲಿ ಅರ್ಥ ಕಾಮಗಳು ಅಂದರೆ ಸಂಪನ್ಮೂಲ ಮತ್ತು ಬೇಡಿಕೆಗಳು ಧರ್ಮ ಮತ್ತು ಮೋಕ್ಷಗಳ ನಡುವೆ ಇದ್ದು ಆರ್ಥಿಕ ವ್ಯವಹಾರ ವಿಚಾರಗಳೆಲ್ಲ ಧರ್ಮಾಧಾರಿತ ಅಂದರೆ ನೀತಿಯುಕ್ತ ಮಾರ್ಗದಲ್ಲಿರಬೇಕು, ಕಾಮ ಅಂದರೆ ಬಯಕೆ ಬೇಡಿಕೆಗಳು ಮೋಕ್ಷ ಅಂದರೆ ತ್ಯಾಗ ಗುರಿಯನ್ನು ಹೊಂದಿರಬೇಕು. Department of Undergraduate School Education ತೆರಿಗೆ ಸಂಗ್ರಹಗಳು ಪ್ರಜೆಗಳಿಗೆ ಹೊರೆಯಾಗದಂತೆ ಹೂವುಗಳಿಂದ ದುಂಬಿಯು ಮಕರಂದ ಹೀರುವಂತಿರಬೇಕು, ಕಟ್ಟ ಕಡೆಯ ವ್ಯಕ್ತಿಯೂ ಸಹಾ ಸಂತೃಪ್ತನಾಗಿರುವಂತೆ ನೋಡಿಕೊಳ್ಳುವುದು ಆಡಳಿತ ಮಾಡುವವರ ಆರ್ಥಿಕ ಕರ್ತವ್ಯ ಎಂಬುದನ್ನು ಹೇಳಿರುವ ನಮ್ಮ ಪ್ರಾಚೀನ ಅರ್ಥಶಾಸ್ತ್ರಜ್ಞರ ವಿಚಾರಗಳನ್ನು ಮನನ ಮಾಡಿಕೊಂಡು ಉಪನ್ಯಾಸಕರುಗಳು ವಿದ್ಯಾರ್ಥಿಗಳಿಗೆ ಪಠ್ಯೇತರವಾಗಿ ಹೇಳಬೇಕು ಎಂದು ಮಂಜುನಾಥ್ ನಿದರ್ಶನಗಳ ಸಹಿತ ವಿವರಿಸಿದರು.
ಜಿಲ್ಲಾ ಅರ್ಥಶಾಸ್ತ್ರ ವೇದಿಕೆ ಅಧ್ಯಕ್ಷರು ಪ್ರಾಚಾರ್ಯರೂ ಆದ ಬಿ ನಾಗರಾಜಪ್ಪ, ನಿಕಟಪೂರ್ವ ಅಧ್ಯಕ್ಷರು ಪ್ರಾಚಾರ್ಯರೂ ಆದ ಎಸ್ ಪ್ರದೀಪ್ ಕುಮಾರ್ ಮುಂತಾಗಿ ಜಿಲ್ಲೆಯಿಂದ ಆಗಮಿಸಿದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರಗಳು ಉಪಸ್ಥಿತರಿದ್ದು ಡಾ.ಎಚ್ ಬಿ ಮಂಜುನಾಥರನ್ನು ಸನ್ಮಾನಿಸಿದರು.
