Klive Special Aricle ಪ್ರತಿವರ್ಷದಂತೆ ಈ ವರ್ಷವು ಸಹ ನಮ್ಮೆಲ್ಲ ನೆಚ್ಚಿನ ಶಿಕ್ಷಕರನ್ನು ನೆನೆದು, ಅವರು ನಮಗೆ ನೀಡಿದ ಮಾರ್ಗದರ್ಶನ, ಶಿಕ್ಷಣ, ಕಲಿಸಿದ ನೈತಿಕ ಶಿಕ್ಷಣ, ಸಹಕಾರ, ವ್ಯಕ್ತಿತ್ವ ರೂಪುಗೊಳ್ಳಲು ನೀಡಿದ ಹಿತನುಡಿ ಎಲ್ಲವನ್ನು ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ನೀಡುವ ದಿನ ‘ಶಿಕ್ಷಕರ ದಿನ’ ಬಂದಿದೆ.
ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಭಯದಿಂದ ನಿರ್ಭಯದ ಕಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು.
ಇಂತಹ ಗುರುಗಳು ನೀಡಿದ ಮಾರ್ಗದರ್ಶನ, ಶಿಕ್ಷಣ, ನೈತಿಕ ಬುದ್ದಿ, ಸಹಕಾರ, ವ್ಯಕ್ತಿತ್ವ ರೂಪುಗೊಳ್ಳಲು ನೀಡಿದ ಹಿತನುಡಿ ಎಲ್ಲವನ್ನು ಸ್ಮರಿಸಲು , ಅವರಿಗೆ ಗೌರವ ಸಮರ್ಪಣೆ ನೀಡಲು ಇರುವ ದಿನವೇ ‘ಶಿಕ್ಷಕರ ದಿನ’…
ಪುರಂದರ ದಾಸರ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ….
ಇವುಗಳು ಕೇವಲ ಪದಗಳಲ್ಲ. ಶಿಕ್ಷಕರ ಮಹತ್ವ ಸಾರುವ ಸಾಲುಗಳು.
ಗುರುಕುಲದಿಂದ ಹಿಡಿದು ಆಧುನಿಕತೆಯ ತಂತ್ರಜ್ಞಾನದವರೆಗೂ ಗುರುವಿಗೆ ಇರುವ ಮಹತ್ವ ಬಹು ದೊಡ್ಡದು.
ಬದುಕು ಕೊಡುವ ತಂದೆ ತಾಯಿಯಂತೆ ಜೀವನ ರೂಪಿಸುವ ಗುರುಗಳು ದೇವರಿಗೆ ಸಮಾನ ಎಂಬ ಮಾತಿದೆ. ಹಾಗಾಗಿಯೇ ಗುರು ದೇವೋ ಗುರು ಬ್ರಹ್ಮ ಗುರು ವಿಷ್ಣು ಮಹೇಶ್ವರಹ ಎಂದು ಗುರುಗಳನ್ನು ದೇವರಿಗೆ ಹೋಲಿಸಲಾಗಿದೆ. ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಗುರುಗಳ ಮಾರ್ಗದರ್ಶನ, ಸಲಹೆ ಅಗತ್ಯ ಅವಶ್ಯಕ. ಈಗಿನ ಆಧುನಿಕ ಯುಗದಲ್ಲಿ, ಕಂಪ್ಯೂಟರ್ ,ಮೊಬೈಲ್ ಫೋನ್, ಟ್ಯಾಬ್, ಮುಂತಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿನ ವಿಷಯಗಳನ್ನು ತಿಳಿದುಕೊಳ್ಳಬಹುದು. ಆದರೆ ಶಾಲೆಯ ನಾಲ್ಕು ಗೋಡೆಯ ಮಧ್ಯದಲ್ಲಿ ಕುಳಿತು ಶಿಕ್ಷಕರು ಹೇಳಿಕೊಡುವ ಪಾಠದ ಮುಂದೆ ಅದೆಲ್ಲವೂ ಗೌಣ.
Klive Special Aricle ಜಗತ್ತು ಎಷ್ಟೇ ಮುಂದುವರೆದಿದ್ದರೂ ಗುರುವಿನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಪ್ರತಿಯೊಂದು ಹಂತದಲ್ಲಿ ಗುರುವಿನ ಮಾರ್ಗದರ್ಶನ, ಸಲಹೆ , ಸಹಕಾರ ಅತ್ಯಗತ್ಯ. ಮನುಷ್ಯ ತನ್ನ ಜೀವನವನ್ನು ರೂಪಿಸಿಕೊಳ್ಳಲು ಗುರುವಿನ ಮೊರೆ ಹೋಗಬೇಕಾಗುತ್ತದೆ. ಉತ್ತಮ ವ್ಯಕ್ತಿತ್ವದೊಂದಿಗೆ ಜೀವನ ಪಾಠವನ್ನ ಹೇಳಿಕೊಡುವ ಎಲ್ಲಾ ಶಿಕ್ಷಕ ವೃಂದದವರಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ಮಹತ್ವಪೂರ್ಣವಾಗಿಸೋಣ.
