Rotary Club Shivamogga ಕುಂದಾಪುರದ ಸಾಸ್ತಾನದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು 10 ಜಿಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಶಿವಮೊಗ್ಗ ನಗರದ ಅಂತರಾಷ್ಟ್ರೀಯ ಸೇವೆಯ ಸಂಸ್ಥೆಗಳಲ್ಲಿ ಒಂದಾದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ 47 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತ ರೋಟರಿ ಶಾಲೆ, ರೋಟರಿ ಚಿತಾಗಾರ, ಮಾನವೀಯ ಸೇವೆಗಳನ್ನು ಮಾಡುವುದರ ಜತೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಕ್ಲಬ್ ಆಗಿ ಸ್ಥಾಪನೆಗೊಂಡಿದೆ.
2024-25ನೇ ಸಾಲಿನಲ್ಲಿ ಸಲ್ಲಿಸಿದ ಶುದ್ಧ ನೀರು, ಶುಚಿತ್ವ, ಮಹಿಳಾ ಸಬಲೀಕರಣ, ರಸ್ತೆ ಸುರಕ್ಷತೆ, ಯುವಜನರ ಸಬಲೀಕರಣ, ಆರೋಗ್ಯ ಶಿಬಿರಗಳು ಹಾಗೂ ಹಲವಾರು ಮನುಕುಲದ ಸೇವೆಗಳನ್ನು ಗುರುತಿಸಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಸಾರ್ವಜನಿಕ ಸೇವೆಗೆ 10 ಜಿಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷ, ಸಮಿತಿ ಚೇರ್ಮನ್ ಬಿ.ಸಿ.ಗೀತಾ, ಸಿ.ಎ.ದೇವಾನಂದ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 14 ಜನ ಹೊಸ ಸದಸ್ಯರನ್ನು ಸೇರಿಸಿದಕ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.
Rotary Club Shivamogga ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ರೋಟರಿ ಶಿವಮೊಗ್ಗ ನಿಕಟಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ಹಾಲಿ ಅಧ್ಯಕ್ಷ ನೆಪ್ಚೂನ್ ಕಿಶೋರ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಚಂದ್ರಹಾಸ ರಾಯ್ಕರ್, ಮಾಜಿ ಅಧ್ಯಕ್ಷರಾದ ಎ.ಒ.ಮಹೇಶ್, ನಿಕಟಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಸ್ವೀಕರಿಸಿದರು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಎಲ್ಲಾ ಸದಸ್ಯರು ಅಭಿನಂದಿಸಿದರು.
Rotary Club Shivamogga ಶಿವಮೊಗ್ಗ ರೋಟರಿ (ಪೂರ್ವ ) ಕ್ಲಬ್ ಕಿರೀಟಕ್ಕೆ 10 ಜಿಲ್ಲಾ ಪ್ರಶಸ್ತಿಗಳ ಗರಿ
Date:
