Madhu Bangarappa ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನವರು ಬಾನು ಮುಸ್ತಾಕ್ ಅವರು ತಿಲಕ ಇಟ್ಟು ದಸರಾ ಉದ್ಘಾಟನೆ ಮಾಡಲಿ ಎಂಬ ಬಿಜೆಪಿಯವರ ಹೇಳಿಕೆ ವಿಚಾರವಾಗಿ ಮಾತನಾಡಿದರು.
ಬಿಜೆಪಿಯವರಿಗೆ ತಲೆ ಸರಿ ಇಲ್ಲ. ತಿಲಕ ಇಟ್ಟುಕೊಂಡು ಉದ್ಘಾಟನೆ ಮಾಡಬೇಕು ಎಂಬುವ ಬಿಜೆಪಿಯವರ ಹೇಳಿಕೆ ಬರಿ ಡೋಂಗಿ.
ಬಿಜೆಪಿಯವರು ಹೊರಗಡೆ ತಿಲಕ ಇಟ್ಟುಕೊಳ್ಳುತ್ತಾರೆ ಮಾಡುವುದೆಲ್ಲ ಹೊಲಸು ಕೆಲಸ ಎಂದಿದ್ದಾರೆ.
ಇದಕ್ಕೆಲ್ಲ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ.
ಬಿಜೆಪಿಯವರು ಯಾವಾಗಲೂ ಮೊಸರಲ್ಲಿ ಕಲ್ಲು ಹುಡುಕುತ್ತಾರೆ.ಅದು ಅವರಿಗೆ ಅಭ್ಯಾಸ ಆಗಿಬಿಟ್ಟಿದೆ.
ಏನಾದರೂ ಧಾರ್ಮಿಕವಾಗಿ ಈ ರೀತಿಯ ವಿಚಾರಗಳು ಸಿಕ್ಕರೆ ಬೆಂಕಿ ಹೆಟ್ಟುವ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಇನ್ಮೇಲೆ ಈ ರೀತಿಯ ಕೆಲಸಗಳು ನಮ್ಮ ದೇಶದಲ್ಲೂ ಮಾಡೋದಕ್ಕೆ ಆಗೋದಿಲ್ಲ.
ಅವರು ಎಲ್ಲಾ ತರಹದ ಚೋರಿ ಮಾಡಿಯಾಗಿದೆ.ಅದು ಸಾಮಾನ್ಯ ಜನರಿಗೂ ಗೊತ್ತಾಗಿದೆ. ಬಿಹಾರದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ಗೊತ್ತಾಗಿದೆ.
Madhu Bangarappa ಅಲ್ಲಿಯ ಮಕ್ಕಳು ಬಿಜೆಪಿ ಅವರಿಗೆ ವೋಟ್ ಚೋರ್ ಗದ್ದಿ ಚೊರ್ ಎಂದು ಕರೆಯುತ್ತಿದ್ದಾರೆ.
ಒಂದು ದಿಸ ನಿಮಗೂ ಟೈಮ್ ಬರುತ್ತೆ ಇನ್ನೊಂದು ದಿವ್ಸ ನಮಗೂ ಒಳ್ಳೆ ಟೈಂ ಬರುತ್ತದೆ ಎಂದು ಹೇಳಿದ್ದಾರೆ.
