JCI Institute ವಿದ್ಯಾಭ್ಯಾಸದ ಜೊತೆಗೆ ಮಕ್ಕಳಲ್ಲಿ ಕೌಶಲ್ಯ ವೃದ್ಧಿಸುವ ಪರೀಕ್ಷೆಗಳು ಅತ್ಯಂತ ಅವಶ್ಯಕ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.
ನಗರದ ರೋಟರಿ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಪರೀಕ್ಷೆಗಳನ್ನು ಎದುರಿಸುವುದು ಹಾಗೂ ಹೊಸ ಫಾರಂಗಳನ್ನು, ಅಪ್ಲಿಕೇಶನ್‌ಗಳನ್ನು ಯಾವ ರೀತಿ ತುಂಬಬೇಕು. ಪರೀಕ್ಷೆಗಳನ್ನ ಹೇಗೆ ಎದುರಿಸಬೇಕು ಎಂಬ ಹಲವಾರು ಅತಿ ಮುಖ್ಯ ಕೌಶಲ್ಯಗಳನ್ನು ಜೆಸಿಐನ ಜೆಸಿ ಸ್ಯಾಟ್ ಕಲಿಸುತ್ತದೆ ಎಂದು ತಿಳಿಸಿದರು.
ಇದು ರಾಷ್ಟ್ರಮಟ್ಟದ ಪರೀಕ್ಷೆ ಆಗಿದ್ದು, ಇದರಲ್ಲಿ ವಿಜೇತರಿಗೆ ಒಂದು ಲಕ್ಷ ರೂ. ಹಾಗೂ 50,000 ರೂ. ಮತ್ತು 25000 ರೂ ನಗದು ಬಹುಮಾನ ಇರುತ್ತದೆ ಎಂದು ಮಾಹಿತಿ ತಿಳಿಸಿದರು.
JCI Institute ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್ ಮಾತನಾಡಿ, ಜೆಸಿಐ ಸಂಸ್ಥೆ ಮನುಕುಲದ ಸೇವೆಯ ಜೊತೆಗೆ ಮಕ್ಕಳಲ್ಲಿ ಆತ್ಮ ವಿಶ್ವಾಸ, ಕೌಶಲ್ಯವನ್ನು ತುಂಬುವ ಜೊತೆಗೆ ಇಂತಹ ಪರಿಣಾಮಕಾರಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸೂರ್ಯನಾರಾಯಣ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ನೆಪ್ಟ್ಯೂನ್ ಕಿಶೋರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಪ್ರಮುಖರಾದ ಶೇಷಗಿರಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
JCI Institute ಅತಿಮುಖ್ಯ ಕೌಶಲಗಳನ್ನ ಜೆಸಿ ಸ್ಯಾಟ್ ವಿದ್ಯಾರ್ಥಗಳಿಗೆ ಕಲಿಸುತ್ತದೆ- ಜಿ.ವಿ.ಗಣೇಶ್
Date:
